ಕುಮಾರ ಸ್ವಾಮಿ ಸರ್ಕಾರ ಕೆಡವಲು ಪ್ರಥಮವಾಗಿ ರಾಜೀನಾಮೆ ಕೊಟ್ಟ ಆನಂದ್ ಸಿಂಗ್, ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಇದೇ ರೀತಿಯ ಎಚ್ಚರಿಕೆ ನೀಡಿದ್ದಾರೆ. ಹೊಸಪೇಟೆಯ ತಮ್ಮ ಕಚೇರಿಯಲ್ಲಿ ಶಾಸಕರ ಕಚೇರಿ ನಾಮಫಲಕ ತೆರವುಗೊಳಿಸಿ ತಮಗೆ ನೀಡಿರುವ ಪ್ರವಾಸೋದ್ಯಮ ಇಲಾಖೆ ನನಗೆ ಸಮಾಧಾನ ನೀಡಿಲ್ಲ.
ನನ್ನ ಯೋಗ್ಯತೆ ಗೆ ತಕ್ಕನಾದ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದು, ಸದ್ಯ ರಾಜ್ಯದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ , ಜೊತೆ ಮಾತನಾಡಿದ್ದು, ಸಿಎಂ ಬೊಮಾಯಿ ಜತೆ ಕೂಡ ಮಾತನಾಡಿದ್ದಾರೆ. ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಅಯಸ್ಸು ಎಂಬಂತೆ ಯೋಚಿಸಿರು ಸಿಎಂ ಸದ್ಯ ದೆಹಲಿ ವರಿಷ್ಟರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಇಷ್ಟೆಲ್ಲ ಮಾತುಕತೆ ಮುಗಿದ ಮೇಲೆ ತವರಿನ ಕಡೆಗೆ ಹೊರಟ ಆನಂದ್ ಸಿಂಗ್, ಪ್ರಬಲ ಖಾತೆ ಸಿಗುವವರೆಗೆ ನಾನು ಸಮಾಧಾನಗೊಳ್ಳಲಾರೆ ಎಂದು ತಮ್ಮ ಅಪ್ತರ ಬಳಿ ಹೇಳಿಕೊಂಡಿದ್ದಾರೆ. ಹಾಗೆ ಆಗಸ್ಟ್ 15 ರವರೆಗೆ ತಮ್ಮ ತವರಿನಲ್ಲಿ ಧ್ವಜರೋಹಣ ಮುಗಿಸಿ ದೆಹಲಿಗೆ ತೆರಳಿ ವರಿಷ್ಟರೊಂದಿಗೆ ಮಾತುಕತೆಗೆ ಮುಂದಾಗಿ ಪ್ರಬಲ ಖಾತೆ ಪಡೆದುಕೊಳ್ಳುವ ಆಶಯದಲ್ಲಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಸರಕಾರ ಕೆಡವಿ ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದ ಆನಂದ್ ಸಿಂಗ್ ಸದ್ಯ ರಾಜ್ಯ ರಾಜಕೀಯ ದ ಕೇಂದ್ರ ಬಿಂದುವಾಗಿದ್ದು, ಆಗಸ್ಟ್ 15 ರ ನಡೆಯುವ ರಾಜ್ಯ ರಾಜಕೀಯ ಬೆಳವಣಿಗೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಆನಂದ್ ಸಿಂಗ್ ಗೆ ತಮ್ಮನಡೆ ಸಿಹಿ ಕೊಡುತ್ತು ಬೊಮ್ಮಾಯಿ ಸರಕಾರಕ್ಕೆ ಕಹಿ ಕೊಡುತ್ತ ಅನ್ನೋದು 15ರ ನಂತರವಷ್ಟೇ ತಿಳಿಯಲಿದೆ……..