ಚೇರಿನ ಬೆಲೆ ಗೊತ್ತಿಲ್ಲ ನಿನಗೆ; ಡಿಕೆಶಿ
ಕೆಪಿಸಿಸಿ ಕಾರ್ಯ ಅದ್ಯಕ್ಷ ರಾಗಿ ಪದಗ್ರಹಣ ಮಾಡುತ್ತಿರುವ ವೇಳೆ ಕೆಪಿಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯಗೆ ಚೇರಿನ ಬೆಲೆ ಗೊತ್ತಿಲ್ಲ ನಿನಗೆ ಹೋಗಿ ಕುಳಿತಕೊಳ್ಳಯ್ಯ ಎಂದು ಸಲಹೆ ನೀಡಿದ್ದಾರೆ.
ಭಾಷಣ ಮುಂದುವರಿಸಿದ ಡಿಕೆಶಿ ನಾವು ಚೇರಿಗಾಗಿ ಕಚ್ಚಾಡುತ್ತಿದ್ದೆವೆ, ಚೇರಿನ ಬೆಲೆ ತಿಳಿದುಕೋ ಎಂದರು. ಹಾಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಗೆದ್ದವರಿಗೆ ಹಾಗೂ ಸೋತವರು ಕೂಡ ನಾಯಕರೇ ನಿಮ್ಮಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ತಿಳಿಸಿದರು.
ರಕ್ಷಾ ರಾಮಯ್ಯ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ನಾನು ಸದಾ ಒಂದು ಮಾತು ಹೇಳುತ್ತಿರುತ್ತೇನೆ.. ಮನುಷ್ಯನ ಹುಟ್ಟು ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದೇ ಮುಖ್ಯ ಎಂದು.
ಇಂದು ಪ್ರತಿಯೊಬ್ಬ ವ್ಯಕ್ತಿ ಕೂಡ ಮುಖ್ಯ. ನಮ್ಮ ಧೃವನಾರಾಯಣ್ ಅವರು ಒಂದು ಮತದಿಂದ ಗೆಲುವು ಸಾಧಿಸಿದ್ದರು. ಅವಕಾಶ ಯಾವಾಗಲೂ ಸಿಗಲ್ಲ. ಇತ್ತೀಚೆಗೆ ಬೆಳಗಾವಿ ಚುನಾವಣೆಯಲ್ಲಿ ಪ್ರತಿ ಬೂತ್ ನಲ್ಲಿ ಒಂದೆರಡು ಮತಗಳು ಹೆಚ್ಚಾಗಿದ್ದರೂ ಈ ರಾಜ್ಯದಲ್ಲಿ ಇತಿಹಾಸ ಸೃಷ್ಟಿಯಾಗುತ್ತಿತ್ತು. ಪ್ರಜಾಪ್ರಭುತ್ವದಲ್ಲಿ 49 ಬಂದರೂ ಶೂನ್ಯ, 51 ಬಂದರೆ ಶತಕ ಇದ್ದಂತೆ.
ನೂತನ ತಲೆಮಾರಿನ ನಾಯಕರನ್ನು ಆರಿಸಬೇಕು. ನನಗೂ ಈ ಬಗ್ಗೆ ಆದೇಶ ಇದೆ. ಹೀಗಾಗಿ ನೀವು ನಾಯಕರಾಗಿ ಬೆಳೆಯಲು ಸಿದ್ಧರಾಗಿ. ನೀವು ಪ್ರತಿ ಕಾಲೇಜು, ಹಳ್ಳಿಗೆ ಹೋಗಬೇಕು.
ನಾವು ಡಿಜಿಟಲ್ ಯೂಥ್ ಬಗ್ಗೆ ಮಾತನಾಡುತ್ತೇವೆ. ಇದು ಮತ ನೀಡುವುದಿಲ್ಲ. ಆದರೆ ನಮ್ಮ ಆಚಾರ-ವಿಚಾರ, ಪಕ್ಷದ ಕಾರ್ಯಕ್ರಮವನ್ನು ಜನರಿಗೆ ತಲುಪಿಸಬೇಕು.
ಮನಮೋಹನ್ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರದ ಕಾರ್ಯಕ್ರಮಗಳನ್ನು ನಾವು ಜನರಿಗೆ ಮುಟ್ಟಿಸಿದ್ದರೆ ನಾವು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ವಿಫಲರಾಗುತ್ತಿರಲಿಲ್ಲ. ಪ್ರತಿ ಬೂತ್ ನಲ್ಲಿ ತಂಡ ರಚನೆಯಾಗಬೇಕು. ಮಾಧ್ಯಮಗಳು ನಮ್ಮನ್ನು ಬೆಂಬಲಿಸುತ್ತವೋ ಇಲ್ಲವೋ ಗೊತ್ತಿಲ್ಲ. ನಿಮ್ಮದೇ ಆದ ಜನ, ತಂಡ ಇರಬೇಕು.
ಈ ದೇಶದಲ್ಲಿ ವಿದ್ಯಾವಂತ, ಬುದ್ಧಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಪ್ರಜ್ಞಾವಂತರಿರಬೇಕು. ನಾವು ಈ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಅದು ಇಬ್ಬರಿಂದ ಮಾತ್ರ ಸಾಧ್ಯ. ಒಂದು ಮಹಿಳೆಯರು, ಮತ್ತೊಂದು ಯುವಕರು. ಇವರಿಬ್ಬರು ದೇಶದಲ್ಲಿ ಬದಲಾವಣೆ ತರಲು ಸಾಧ್ಯ.
ಈ ಇಬ್ಬರಿಗಾಗಿ ಒಂದು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಯುವಕರನ್ನು ಪ್ರತಿ ಹಳ್ಳಿ ಹಾಗೂ ಬೂತ್ ಗಳಿಗೆ ಕಳುಹಿಸಿ. ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಿಮಗೆ ಏನು ಮಾಡಿದೆ? ಉದ್ಯೋಗ, ಊಟ, ಮನೆ ಕೊಟ್ಟಿದ್ದಾರಾ..? ಬೆಲೆ, ಹಣದುಬ್ಬರ ಇಳಿಸಿದ್ದಾರಾ..? ನಾವು 60 ವರ್ಷದಲ್ಲಿ ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಜನರಿಗೆ ಗೊತ್ತಿದೆ. ಈ ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂಬುದು.
ನಿನ್ನೆ ಕಳೆದುಹೋಗಿದೆ, ಅದು ನಿಮ್ಮ ಕೈಗೆ ಮತ್ತೆ ಸಿಗದ ಇತಿಹಾಸ. ನಾಳೆ ಎಂಬುದು ಭವಿಷ್ಯ. ನಾವು ಇರುತ್ತೇವೋ, ಇಲ್ಲವೋ ಗೊತ್ತಿಲ್ಲ. ಆದರೆ ಇಂದು ಎಂಬುದು ನಿಮ್ಮ ಕೈಯಲ್ಲಿದೆ. ಆ ದಿನವನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಮುಡಿಪಿಟ್ಟಿದ್ದೇನೆ ಎಂಬುದು ಮುಖ್ಯ.
ದೆಹಲಿಯಲ್ಲಿ 74ನೇ ತಿದ್ದುಪಡಿ ವಿಚಾರದ ಬಗ್ಗೆ ಚರ್ಚೆ ಮಾಡುವಾಗ, ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರು ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಿದ್ದರು. ಆ ಸಮಯದಲ್ಲಿ ನಾನು ಇದು ಯಾಕೆ, ಅದರ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದೆ. ಆಗ ರಾಜೀವ್ ಗಾಂಧಿ ಅವರು, ಈ ಹಿಂದೆ ಕಾಲೇಜು ಚುನಾವಣೆಗಳು ನಡೆದು ನಾಯಕರು ಹುಟ್ಟಿಕೊಳ್ಳುತ್ತಿದ್ದರು. ಆದರೆ ಈಗ ಈ ತಿದ್ದುಪಡಿಯಿಂದ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ಬೆಳೆಸಲು ಅವಕಾಶವಿದೆ. ಹೀಗಾಗಿ ಇಲ್ಲಿ ಮೀಸಲಾತಿ ನೀಡಬೇಕು. ಎಲ್ಲ ಸಮಾಜದವರು, ಮಹಿಳೆಯರು ಹಾಗೂ ಯುವಕರಿಗೆ ಅವಕಾಶ ಸಿಗಬೇಕು. ನಾಯಕರನ್ನು ಬೆಳೆಸುವವನು ನಿಜವಾದ ನಾಯಕ, ಹಿಂಬಾಲಕರನ್ನು ಬೆಳೆಸುವವನಲ್ಲ ಎಂದು ಹೇಳಿದ್ದರು.
ನೀವು ಬರುತ್ತಿದ್ದಂತೆ ವಿಧಾನಸೌಧ ನೋಡಬೇಡಿ. ನಾನು ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ವಿಲಾಸ್ ರಾವ ದೇಶ್ ಮುಖ್ ಪಂಚಾಯ್ತಿ ಮುಖ್ಯಸ್ಥರಾಗಿದ್ದರು. ಜವಾಹರಲಾಲ್ ನೆಹರೂ ಅವರು ಮುನ್ಸಿಪಲ್ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಅವರು ಬೆಂಗಳೂರು ಮುನ್ಸಿಪಲ್ ಸದಸ್ಯರಾಗಿದ್ದವರು. ರಾಮಲಿಂಗಾರೆಡ್ಡಿ ರೆಡ್ಡಿ ಅವರು ಕಾರ್ಪೊರೇಟರ್ ಆಗಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ನೀವು ಕೆಳ ಹಂತದಿಂದ ಒಂದೊಂದೇ ಹೆಜ್ಜೆ ಇಡಬೇಕು.