“ಬೆಳ್ಳಗಿರುವುದೆಲ್ಲಾ ಹಾಲಲ್ಲ…. IAS ಮಾಡಿದವರೆಲ್ಲಾ ಸಾಮಾನ್ಯ ಜ್ಞಾನದ ನಿಪುಣರೇನಲ್ಲ….”
ಎಂಬ ಮಾತು ಪಾಲಿಕೆಯ ವಿಷಯವೊಂದರಲ್ಲಿ ನಿಜವಾಗಿದೆ.
ಕಟ್ಟಡ ನಿರ್ಮಾಣದ ನಕ್ಷೆ ಮಂಜೂರಾತಿ ನೀಡುವ ನಗರ ಯೋಜನೆ ಇಲಾಖೆಯ ಅಧಿಕಾರಿಗಳೇ, ಆಯಾ ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು / ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ , ನೋಟೀಸ್ ಗಳನ್ನು ನೀಡುವ ಕಾರ್ಯ ಮತ್ತು RTI ಅರ್ಜಿಗಳಿಗೆ ಉತ್ತರಿಸುವ ಕಾರ್ಯ ಗಳನ್ನು Planning Authority ಯವರೇ – ಅಂದರೆ, ನಗರ ಯೋಜನೆ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳೇ ನಿರ್ವಹಿಸಬೇಕಂದು ಸುತ್ತೋಲೆಗಳನ್ನು ಪಾಲಿಕೆಯ 08 ವಲಯಗಳ ಪೈಕಿ 07 ವಲಯಗಳ ವಲಯ ಆಯುಕ್ತರುಗಳು ಹೊರಡಿಸಿದ್ದಾರೆ.
ಆದರೆ, ಪೂರ್ವ ವಲಯದ ವಲಯ ಆಯುಕ್ತರಾಗಿರುವ ಮತ್ತು ವಿಶೇಷ ಆಯುಕ್ತರು (ಯೋಜನೆ) ಮನೋಜ್ ಜೈನ್ ಅವರು ವಿಚಿತ್ರವಾದ ಸುತ್ತೋಲೆಯನ್ನು ಹೊರಡಿಸಿದ್ದು, ಅದರ ಪ್ರಕಾರ ನಗರ ಯೋಜನೆ ಇಲಾಖೆಯಿಂದ ನಕ್ಷೆ ಮಂಜೂರಾತಿ ಪಡೆದಿರುವ ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ, ನೋಟೀಸುಗಳನ್ನು ನೀಡುವ ಕಾರ್ಯ ಮತ್ತು ಈ ಸಂಬಂಧದ RTI ಅರ್ಜಿಗಳಿಗೆ ಉತ್ತರಿಸುವ ಕಾರ್ಯಗಳನ್ನು ಆಯಾ ವಿಭಾಗಗಳ ಕಂದಾಯ ಅಧಿಕಾರಿ (RO) ಗಳು ಮಾಡಬೇಕಿರುತ್ತದೆ !!!!
ಪಾಲಿಕೆಯ ಮುಖ್ಯ ಆಯುಕ್ತರು ಈ ಬಗ್ಗೆ ಕೂಡಲೇ ಗಮನ ಹರಿಸಿ, ಮನೋಜ್ ಜೈನ್ ಅವರಿಂದ ಆಗಿರುವ ಪ್ರಮಾದವನ್ನು ಸರಿ ಪಡಿಸಬೇಕೆಂದು ವಿನಂತಿಸಿಕೊಳ್ಳಲಾಗಿದೆ.
– ರಮೇಶ್ ಎನ್.ಆರ್.
ಅಧ್ಯಕ್ಷರು
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ
ಹಾಗೂ
ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ