ಪುತ್ತೂರಿನ ಉರಿಮಜಲು ರಾಮ್ ಭಟ್ ನಿಧನಕ್ಕೆ ಸ್ಪೀಕರ್ ಸಂತಾಪ
ಆರ್.ಎಸ್.ಎಸ್., ಜನಸಂಘ ಮತ್ತು ಬಿಜೆಪಿಯ ಹಿರಿಯ ನಾಯಕ ಉರಿಮಜಲು ರಾಮ್ ಭಟ್ ನಿಧನಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಂಬನಿ ಮಿಡಿದಿದ್ದಾರೆ.
ಕರಾವಳಿ ಭಾಗದಲ್ಲಿ ಸಂಘ ಪರಿವಾರವನ್ನು ಕಟ್ಟಿ ಬೆಳೆಸಲು ಅವರು ಕಾರಣೀಭೂತರಾಗಿದ್ದರು. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಅವರು ಮೌಲ್ಯಾಧಾರಿತ ಶಿಕ್ಷಣದ ಅಗ್ರೇಸರರಾಗಿ, ಸಂಸ್ಥಾಪಿಸಿದ ಪುತ್ತೂರಿನಲ್ಲಿ ಶ್ರೀ ವಿವೇಕಾನಂದ ಕಾಲೇಜು ಉತ್ತಮ ಮೌಲ್ಯ ಮತ್ತು ಶ್ರೀಮಂತ ನೈತಿಕತೆಯೊಂದಿಗೆ ಸಾವಿರಾರು ಅತ್ಯುತ್ತಮ ವೃತ್ತಿಪರರನ್ನು ರೂಪಿಸಿದೆ.
ವಿಧಾನಸಭೆಯ ಸದಸ್ಯರಾಗಿದ್ದ ರಾಮ್ ಭಟ್ ಅವರ ಭಾಷಣ ಪ್ರೌಢಿಮೆಯಿಂದ ಕೂಡಿರುತ್ತಿತ್ತು, ಸ್ಫುಟವಾಗಿರುತ್ತಿತ್ತು, ಅವರ ಮಾತುಗಳು ಸ್ಪಷ್ಟತೆ ಮತ್ತು ನಿಖರತೆಯೊಂದಿಗೆ ಸಮಚಿತ್ತವಾಗಿರುತ್ತಿತ್ತು.
ರಾಮ್ ಭಟ್ ಅವರ ಅಕಾಲಿಕ ನಿಧನದಿಂದ ಒಟ್ಟಾರೆಯಾಗಿ ಸಂಘ ಪರಿವಾರದ, ಅದರಲ್ಲೂ ಸಾರ್ವಜನಿಕ ಜೀವನದ ಒಂದು ವೈಭವೋಪೇತ ಅಧ್ಯಾಯ ಕೊನೆಯಾಗಿದೆ.
ಭಟ್ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ.
ಸಹಿ/-
ಎಸ್.ಎ.ಹೇಮಂತ್
ಮಾನ್ಯ ಸ್ಪೀಕರ್ ಅವರ ಮಾಧ್ಯಮ ಸಮನ್ವಯಾಧಿಕಾರಿ,
ಕರ್ನಾಟಕ ವಿಧಾನಸಭೆ.
((()))
ಸಿಲಿಕಾನ್ ಸಿಟಿಯಲ್ಲಿ ಲವ್ ಜಿಹಾದ್ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯೊಬ್ಬಳು ಲವ್ ಜಿಹಾದ್ ಆರೋಪ ಮಾಡಿದ್ದು, ಆಕೆ ನೀಡಿರುವ ದೂರಿನ ಆಧಾರದ ಮೇಲೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯು...