‘ಪರಮಪದ’ ಸಂಗೀತ ಸಾಹಿತ್ಯ ರಂಗದ ಆಸಕ್ತ ಗೆಳೆಯರು ಸೇರಿ ಪ್ರಾರಂಭಿಸಿದ ಸಂಸ್ಥೆ. ಇದರ ಮಾಸ ಮಾನಸ ಪ್ರತಿ ತಿಂಗಳ ಕಾರ್ಯಕ್ರಮ. ಉದ್ದೇಶ ಪ್ರತೀ ತಿಂಗಳು ಒಂದು ದಿನ ಒಂದೆರಡು ಗಂಟೆ ಹಾಡು ಹರಟೆ ಜೊತೆ ಹಗುರಾಗುವುದು.. ರಾಮಚಂದ್ರ ಹಡಪದ್ ಗಾಯನದ ಮುಂದಾಳತ್ವ ವಹಿಸಿಕೊಂಡಿದ್ದು ಪ್ರತಿ ತಿಂಗಳು ಅವರೊಂದಿಗೆ ನಾಡಿನ ಹೆಸರಾಂತ ಗಾಯಕ ಗಾಯಕಿಯರು ಜೊತೆಯಾಗಿ ಒಂದು ಆಪ್ತ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ವಿಮರ್ಶಕರು, ನಿರ್ದೇಶಕರು, ಪತ್ರಕರ್ತರು ಜೊತೆಗಿದ್ದು
ಅವರ ಅನುಭವದ ಮಾತುಗಳೊಂದಿಗೆ ನಮಗೊಂದು ವಿಶೇಷ ಅನುಭವ ಸಿಗಬಹುದು. ನಮ್ಮ ಕೋರಿಕೆಯ ಹಾಡುಗಳು ಕೇಳಿ ಬರಬಹುದು. ಕಾರ್ಯಕ್ರಮದ ನಂತರ ಸಹ ಭೋಜನ, ಮಾತು ಅಭಿಪ್ರಾಯ ವಿನಿಮಯ ಹೀಗೆ. ಇದು ಎಲ್ಲರು ಕೈಜೋಡಿಸಿ ಮಾಡುವ ಕಾರ್ಯಕ್ರಮ. ಟಿಕೆಟ್ ಅಂತೇನು ಇಲ್ಲ . ಕಾರ್ಯಕ್ರಮದ ಒಟ್ಟು ಖರ್ಚು ಎಲ್ಲರು ಸೇರಿ ಭರಿಸುವುದೆಂದು ತೀರ್ಮಾನಿಸಲಾಗಿದೆ. ಒಬ್ಬರು ಐನೂರು ರೂಪಾಯಿ, ಅಥವ ಕುಟುಂಬದ ಜೊತೆ ಬಂದರೆ ಸಾವಿರ ರೂಪಾಯಗೆ ಒಂದೊಳ್ಳೆ ಕಾರ್ಯಕ್ರಮ ,ಊಟ, ಜೊತೆಗೆ ಆಪ್ತ ವಲಯದ ಜೊತೆಯ ಸಂಭ್ರಮ. ಆರ್ಥಿಕ ಸಂಕಷ್ಟವಿದ್ದಲ್ಲಿ ಕೊಡಲೇಬೆಕಂತಲು ಇಲ್ಲ. ಸೀಮಿತ 150 ರಿಂದ ಇನ್ನೂರು ಜನರಿಗಷ್ಟೆ ವ್ಯವಸ್ಥೆ ಇರುವುದರಿಂದ ಒಂದೆರಡು ದಿನ ಮುಗಡವಾಗಿ ಬರುವುದನ್ನು ಖಚಿತ ಪಡಿಸಿದರೆ ವ್ಯವಸ್ಥೆ ಗೆ ಅನುಕೂಲ.
ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ..!
ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ ನಡೆಯುತ್ತಿದ್ದು, ಟೌನ್‌ಹಾಲ್ ಬಳಿ ನೂರಾರು ಜನರು ಸೇರಿದ್ದಾರೆ. 144 ಸೆಕ್ಷನ್ ನಡುವೆಯೂ ಮಹಿಷ ದಸರಾಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಮಹಿಷ ಉತ್ಸವ...