• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಐಪಿಎಸ್ ಡಿ ರೂಪಾ ಮುದ್ಗಿಲ್ ಪ್ರಶ್ನೆಗಳಿಗೆ ಉತ್ತರಿಸ್ತಾರಾ  ರೋಹಿಣಿ ಸಿಂಧೂರಿ

ಐಪಿಎಸ್ ಡಿ ರೂಪಾ ಮುದ್ಗಿಲ್ ಪ್ರಶ್ನೆಗಳಿಗೆ ಉತ್ತರಿಸ್ತಾರಾ ರೋಹಿಣಿ ಸಿಂಧೂರಿ

February 19, 2023
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

September 26, 2023
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

September 26, 2023
ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

September 26, 2023
ಗರುಡಪುರಾಣ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಗರುಡಪುರಾಣ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

September 26, 2023
ಮೂರು ಡಿಸಿಎಂ ಸ್ಥಾನಕ್ಕೆ ಬೇಡಿಕೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿಎಂ ಸಿದ್ದರಾಮಯ್ಯ

ಮತ ಸೆಳೆಯಲು ಮಹಿಳಾ ಮೀಸಲಾತಿ ಮಸೂದೆ ತರುತ್ತಿದ್ದಾರೆ ಹೊರತು ಮಹಿಳೆಯರ ಮೇಲೆ ಕಾಳಜಿಯಿಂದಲ್ಲ: ಸಿದ್ದರಾಮಯ್ಯ

September 26, 2023
ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

September 26, 2023
ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್; 32 ಸಂಘಟನೆಗಳ ಬೆಂಬಲ

ಬೆಂಗಳೂರು ಬಂದ್​ಗೆ ಪೊಲೀಸರು ಫುಲ್​ ಅಲರ್ಟ್.. ಟೌನ್ ಹಾಲ್ ಬಳಿ 250ಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್..!

September 26, 2023
ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್; 32 ಸಂಘಟನೆಗಳ ಬೆಂಬಲ

ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಸ್ತಬ್ಧವಾಗಲಿದೆ ರಾಜಧಾನಿ..!

September 25, 2023
ಕನ್ನಡದ ಬಿಗ್ ಬಾಸ್ 10 – ಅಕ್ಟೊಬರ್ 8ರಿಂದ ಶುರು

ಫಸ್ಟ್ ಟೈಮ್ ಬಿಗ್ ಬಾಸ್ 10 ಮನೆಗೆ ಹೋಗುವ ಸ್ಪರ್ಧಿಯ ಹೆಸರು ರಿವೀಲ್ ಮಾಡಿದ ಕಲರ್ಸ್ ವಾಹಿನಿ

September 24, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ವಿಕ್ರಮ್ ಲ್ಯಾಂಡರ್ ಪುನಶ್ಚೇತನಕ್ಕೆ 14 ದಿನ ಕಾಯಲಿದೆ ಇಸ್ರೊ

September 24, 2023
ಕೆರೆಗಳನ್ನು ತುಂಬಿಸುವ ಹಾಗೂ ಬ್ಯಾರೇಜ್ ನಿರ್ಮಾಣ ಕಾರ್ಯಗಳಿಗೆ ಒತ್ತು ನೀಡಿ: ಸಣ್ಣ ನೀರಾವರಿ ಸಚಿವ ಎನ್. ಎಸ್ ಬೋಸರಾಜು ಸೂಚನೆ – ವಿಕಾಸಸೌಧದಲ್ಲಿಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಸೆ.​​​ 26ರಂದು ಬೆಂಗಳೂರು ಬಂದ್​​ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ..!

September 23, 2023
ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..!

ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..!

September 23, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home News

ಐಪಿಎಸ್ ಡಿ ರೂಪಾ ಮುದ್ಗಿಲ್ ಪ್ರಶ್ನೆಗಳಿಗೆ ಉತ್ತರಿಸ್ತಾರಾ ರೋಹಿಣಿ ಸಿಂಧೂರಿ

by SakhiGeetha Reporter
February 19, 2023
in News, ಸಖೀ ಸುದ್ದಿ
299 3
0
ಐಪಿಎಸ್ ಡಿ ರೂಪಾ ಮುದ್ಗಿಲ್ ಪ್ರಶ್ನೆಗಳಿಗೆ ಉತ್ತರಿಸ್ತಾರಾ  ರೋಹಿಣಿ ಸಿಂಧೂರಿ
587
SHARES
1.7k
VIEWS
Share on FBShare on TwitterShare on whatsapp
0
0

ಇಂದಿನ ಸುದ್ದಿ, ಎಲ್ಲಾ ಕಡೆ viral ಆಗಿರೋದು, ರೋಹಿಣಿ ಸಿಂಧೂರಿ , ಸಾ ರ ಮಹೇಶ್ , ಮಾನ್ಯ ಎಂಎಲ್ಎ ಅವರ ಬಳಿ ಸಂಧಾನಕ್ಕೆ ಹೋಗಿದ್ದರು ಅಂತ. ಸಂಧಾನಕ್ಕೆ ಹೋಗುವುದು ಅಂದರೆ ಅರ್ಥ ಏನು? ಯಾವ ಐಎಎಸ್ ಅಧಿಕಾರಿ ಕೂಡ ಎಂಎಲ್ಎ ಅಥವಾ ರಾಜಕೀಯ ವ್ಯಕ್ತಿಗಳ ಜೊತೆ, ತಾವು ನಿರ್ವಹಿಸಿದ ಕರ್ತವ್ಯ ನಿಮಿತ್ಯ ಸಂಧಾನಕ್ಕೆ ಹೋಗಿದ್ದು ನಾನು ಇದೇ ಮೊದಲು ಕೇಳಿದ್ದು. ಹಾಗಾದರೆ, ರೋಹಿಣಿ ಸಿಂಧೂರಿ ಐಎಎಸ್ ಸಂಧಾನಕ್ಕೆ ಹೋಗಿದ್ದು ಯಾಕೆ? ಆಕೆ ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ? ತಮ್ಮ ಕರ್ತವ್ಯ ಲೋಪದ ಬಗ್ಗೆಯೋ, ತಮ್ಮ ಭ್ರಷ್ಟಾಚಾರ ಬಗ್ಗೆಯೋ ಏನು?

  1. ಡಿಕೆ Ravi ias, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್ ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ limit cross ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ ಈಕೆ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ.
  2. ಮುಂದೆ ಸಿಇಒ ಮಂಡ್ಯ ಆದಾಗ ಈಕೆ ಕಟ್ಟಿಸಿದ toilets ಗಿಂತ ಹೆಚ್ಚು ತೋರಿಸಿ figures fudge ಮಾಡಿ ಕೇಂದ್ರ ಸರ್ಕಾರದ ಪ್ರಶಸ್ತಿ ತೆಗೆದುಕೊಂಡರು ಎಂಬ ಆರೋಪ ಕೇಳಿ ಬಂತು. ಅದರ ತನಿಖೆಯೇ ಆಗಲಿಲ್ಲ.
  3. ಚಾಮರಾಜನಗರ 24 ಜನರು Oxygen ಇಲ್ಲದೇ ಸತ್ತಾಗ, ಆಪಾದನೆಗಳು ಇವರ ಮೇಲೇ ನೇರವಾಗಿ ಬಂತು. ಅದರಿಂದ ಹೇಗೋ ಪಾರಾದರು.
  4. ಕನ್ನಡದ ಹುಡುಗಿ ಶಿಲ್ಪಾ ನಾಗ್ ಐಎಎಸ್. ಅವರ ಜೊತೆ ಜಗಳ, ರಂಪ. ಏತಕ್ಕಾಗಿ? ಅಲ್ಲಿ ಯಾವುದೇ ಮೌಲ್ಯಾಧಾರಿತ ವಸ್ತು ವಿಷಯ ಇರಲಿಲ್ಲ. ಕೋಳಿ ಜಗಳ. ಶಿಲ್ಪಾ ಗೆ ಹೆಚ್ಚು ಕೆಲಸ ಮಾಡಿದ್ದು, ಹೆಚ್ಚು ಅವರ ಬಗ್ಗೆ ಪಾಸಿಟಿವ್ ಆಗಿ ಬರೆಯಲಾಯಿತು. ಅದನ್ನು ಸಹಿಸಿಕೊಳ್ಳ ಲಾಗದೆ ಶಿಲ್ಪಾ ಗೆ harrassment ಮಾಡಿದರು ಎಂದು ಕೆಲವರು ಹೇಳಿದರು. ಕಡೆಗೆ ಮೈಸೂರಲ್ಲಿ ಗೌಡ journalists Shilpa nag ಅವರಿಗೆ ಜಾತಿ ಬೆಂಬಲ ನೀಡುತ್ತಿದ್ದಾರೆ ಎಂಬ ಮಟ್ಟಿಗೆ ಸ್ವತಃ ಇಲ್ಲದ ಜಾತೀಯತೆ ಮೈಸೂರಿನ ಜರ್ನಲಿಸ್ಟ್ಸ್ ಗಳಲ್ಲಿ ಬಿತ್ತಿದರು ಈಕೆ ಎಂದು ಅನೇಕರು ಹೇಳುತ್ತಾರೆ.
  5. ಹರ್ಷ ಗುಪ್ತ ಐಎಎಸ್. ಅತ್ಯಂತ ಪ್ರಾಮಾಣಿಕ ಅಧಿಕಾರಿ. ಅವರ ಜೊತೆ ಜಗಳ. ಎಲ್ಲಾ ಐಎಎಸ್ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದೆ.
  6. ಮಣಿವಣ್ಣನ್ ಐಎಎಸ್ ಜೊತೆ ಲೇಬರ್/ ಕಾರ್ಮಿಕ ಇಲಾಖೆಯಲ್ಲಿ ಇದ್ದಾಗ ಜಗಳ ಮಾಡಿದ್ದು ಜಗಜನಿತ. ಮಣಿವಣ್ಣನ್ ಒಂದು ರೀತಿ ಅಜಾತಶತ್ರು. ಅಂಥದರಲ್ಲಿ…ಅವರ ಜೊತೆ ಜಗಳ.
  7. ಡಿಕೆ ರವಿ ತೀರಿದ ಕೆಲ ತಿಂಗಳು ಮುಂಚೆ ಕನ್ನಡದ ಹುಡುಗ, N ಹರೀಶ್ ಐಪಿಎಸ್, ಈಕೆಯ batchmate. ಮದ್ವೆ ಆಗಿರಲಿಲ್ಲ, ಆತ, ಈಕೆಗೆ ಕಾದು ಕಾದು ಆತ ಆತ್ಮಹತ್ಯೆ ಮಾಡಿಕೊಂಡದ್ದು ಎಂದು ಹಲವರು ಹೇಳಿದರೂ, ನಾನು ಅದನ್ನು ನಂಬಲಿಲ್ಲ, ಈಗೂ ನಂಬಿಲ್ಲ.
  8. ಸಾ ರಾ mahesh , ಎಂಎಲ್ಎ ಅವರ ಮೇಲೆ ಅನೇಕ ಆಪಾದನೆಗಳನ್ನು ಮಾಡಿದ ಈಕೆ ಒಂದನೂ prove ಮಾಡಲಿಲ್ಲ. ಅದಕ್ಕೇ ಸಂಧಾನಕ್ಕೆ ಹೋದರಾ?
  9. ಮೈಸೂರು ಎಂಪಿ ಪ್ರತಾಪ್ ಸಿಂಹ ಮೇಲೆ ಕೂಡ ಅನೇಕರ ಬಳಿ ಈಕೆ prove ಮಾಡಲಾರದ allegations ಮಾಡಿದರು. ಅಂದರೆ, ಪ್ರತಾಪ್ ಸಿಂಹ ಅವರು private clinics ಗೆ Oxygen ಕೇಳುತ್ತಾ ತಮ್ಮ ಸ್ವಂತ ಲಾಭಕ್ಕೆ ನಿಂತಿದ್ದಾರೆ ಎಂಬ ನಿರಾಧಾರ ಆರೋಪ ಮಾಡಿದರು. ನಿಜ ಇದ್ದಿದ್ದೇ ಆದರೆ ಅದನ್ನು prove ಯಾಕೆ ಮಾಡಲಿಲ್ಲ.
  10. ಹಾಸನದಲ್ಲಿ ತನ್ನನ್ನು ಒಂದು ವರ್ಷದ ಒಳಗೆ ಎತ್ತಂಗಡಿ ಮಾಡಿದ ಸರ್ಕಾರದ ವಿರುದ್ಧ CAT/ Central administrative tribunal) , ಇಲ್ಲಿ ದಾವೆ ಹೂಡಿದರು. ಆ ದಾವೆಗೆ application ಬರೆದು ಕೊಟ್ಟಿದ್ದೇ ನನ್ನ ಪತಿ, Munish moudgil ias. ನನ್ನೆದುರಿಗೆ ಬರೆದು ಬರೆದು ಆಕೆಗೆ, ಆಕೆಯ ತಂದೆಗೆ, ಲಾಯರ್ ಗೆ ಕಳಿಸಿದ್ದರು.
    ಆದರೆ ಈಕೆ, ಮೈಸೂರು ಡಿಸಿ ಆಗಿ ಹೋದದ್ದು ಹೇಗೆ? ತನಗಿಂತ ಕೇವಲ 29 ದಿನ ಮುಂಚೆ ಮೈಸೂರಿಗೆ ಡಿಸಿ ಎಂದು transfer ಆಗಿದ್ದ ಕನ್ನಡ ಹುಡುಗ ಶರತ್ ಅವರನ್ನು ಒಕ್ಕಲೆಬ್ಬಿಸಿ ದ್ದು ನ್ಯಾಯವೇ? ತನ್ನಂತೆ ಪರರು ಎಂಬ ಭಾವನೆ ಇಲ್ಲವೇಕೆ? 29 ದಿನದಲ್ಲಿ ಯಾವುದೇ ಕಳಂಕ, ಆರೋಪ ಇಲ್ಲದ ಶರತ್ ರನ್ನು replace ಮಾಡಿದ್ದು ಈಕೆ ಯಾವ high level influence ನಿಂದಾ?
  11. Dr Ravishankar IAS ಈಕೆಯ ಮೇಲೆ ಪ್ರಿಲಿಮಿನರಿ inquiry ಯಲ್ಲಿ ತಪ್ಪುಮಾಡಿರುವುದು ಸಾಬೀತಾಗಿದೆ. ಮೈಸೂರಿನ ಡಿಸಿ ಮನೆ, ಹೆರಿಟೇಜ್ building ಅಂತಾ ಇದ್ದರೂ ಅಲ್ಲಿ ಟೈಲ್ಸ್ ಹಾಕಿದ್ದು, ಸ್ವಿಮ್ಮಿಂಗ್ ಪೂಲ್ ಮಾಡಿದ್ದು.
    ಮನುಷ್ಯತ್ವ ಇರೋರು covid ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರ?
    John was fiddling when Rome was burning ಅಂದ ಹಾಗೆ. Marie Antoinette ಎಂಬ ರಾಣಿ , ಜನರು bread ಇಲ್ಲದೆ ಸಾಯ್ತ್ತಿದ್ದಾರೆ ಅಂತ ಕೇಳಿಸಿಕೊಂಡಾಗ , bread ಇಲ್ಲದೆ ಇದ್ದರೆ ಏನು, ಜನರು cake ತಿನ್ನಲಿ ಅಂದಳಂತೆ. ಆ ರಾಣಿಯ ನೆನಪಾಯ್ತು.
  12. ಹಿಂದೆ ನನಗೆ ಒಬ್ಬರು whatsapp ಮೆಸೇಜ್ ಮಾಡಿ ತಾವು ಇವರ ಪರವಾಗಿ ನಡೆಸುವ social media handling agency ಒಂದರಲ್ಲಿ ಕೆಲಸ ಮಾಡಿದ್ದು, ಈಗ ಆ ಕೆಲಸ ಬಿಟ್ಟಿದ್ದೇನೆ ಎಂದು ಹೇಳುತ್ತ , ಹೇಗೆ ಅಲ್ಲಿ ಈಕೆಯ ಪರವಾಗಿ ಸುದ್ದಿ, photos ,videos create ಮಾಡುತ್ತಾರೆ, ಹೇಗೆ ಈಕೆಯ ವಿರುದ್ಧ ಇರುವವರ ಟ್ರೋಲ್ ಮಾಡುವ content ಹಾಗೂ ಹ್ಯಾಂಡಲ್ ಗಳು ತಯಾರಾಗುತ್ತವೆ ಎಂಬುದು ಹೇಳಿದ್ದರು. ನಾನು ಅದನ್ನು ಫೇಸ್ಬುಕ್ ದಲ್ಲಿಯೂ ಹಾಕಿದ್ದೆ.
  13. ಈಕೆಯ ಮೇಲೆ ಅಗ್ಗದ ಬ್ಯಾಗ್ ಗಳನ್ನೂ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ಕಂಪ್ಲೈಂಟ್ ಲೋಕಾಯುಕ್ತದಲ್ಲಿ register ಆಗಿದ್ದು , ಅದರ ತನಿಖೆ ಕೈಗೆತ್ತಿಕೊಳ್ಳಲು ಲೋಕಾಯುಕ್ತ ಈಗಾಗಲೇ ಸರ್ಕಾರಕ್ಕೆ ಬರೆದಿದ್ದರೂ ಸರ್ಕಾರ ಮಟ್ಟದಲ್ಲಿ ಕಾರಣ ಕೊಡದೆ ಆಕೆಯನ್ನು ತನಿಖೆಗೆ ಒಳಪಡಿಸಲು ಅನುಮತಿ reject/ ನಿರಾಕರಣೆ ಮಾಡಲಾಗಿದೆ. ಅದರ copy ನನ್ನ ಬಳಿ ಇದೆ. ಸಾಮಾನ್ಯವಾಗಿ ಅಧಿಕಾರಿಗಳಿಗೆ ಈ ರೀತಿಯ support ಇರುತ್ತದೆಯೇ?
    14.ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ , ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ not so decent ಚಿತ್ರಗಳನ್ನು ಕಳಿಸಿರುವ , ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಪಿಕ್ಸ್ ಗಳು ನನಗೆ ಸಿಕ್ಕಿವೆ. ಇದು private vishaya ಆಗುವುದಿಲ್ಲ. All India service conduct rules ಪ್ರಕಾರ ಹಿರಿಯ ಅಧಿಕಾರಿಗಳು ಈ ರೀತಿಯ ಪಿಕ್ಸ್ , ಸಂಭಾಷಣೆ ಮಾಡುವುದು ಅಪರಾಧ. ಈ ಆಪಾದನೆಗಳನ್ನು ಸರ್ಕಾರ ತನಿಖೆ ಮಾಡುವುದೇ, ನೋಡಬೇಕಿದೆ. ಏಕೆಂದರೆ ಸತ್ಯಾ ಸತ್ಯತೆ ಹೊರ ಬರಬೇಕಿದೆ.
  14. ಮೊನ್ನೆ ಇವರ ಭಾವ ಮಧುಸೂಧನ್ ರೆಡ್ಡಿ ಅವರು, lucky Ali ಎಂಬ ಗಾಯಕರ ಜಾಗಕ್ಕೆ 20 – 30 ಜನ ಕರೆದುಕೊಂಡು ಹೋಗಿ ರೌಡಿಸಂ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಂತು. ಈಕೆಯು ತನ್ನ ಐಎಎಸ್ ಪ್ರಭಾವ ಬಳಸಿ ದುರುಪಯೋಗ ಮಾಡಿಕೊಂಡು ಇರುವುದಾಗಿ lucky Ali ಆರೋಪ ಮಾಡಿದರು. ವ್ಯಾಜ್ಯದ ಜಮೀನಿಗೆ 20-30 ಜನ ಕರೆದುಕೊಂಡು ಹೋಗಿ ಕಾನೂನು ಕೈಗೆ ತೆಗೆದುಕೊಳ್ಳಬಹುದು? ಈ ರೀತಿಯ ಭಂಡ ಧೈರ್ಯ ಎಲ್ಲಿಂದ ಬರುತ್ತದೆ? ಐಎಎಸ್ ಅಧಿಕಾರದಿಂದ?
  15. ಇವರ ಗಂಡ , ಹಾಗೂ ಇವರ ಮಾವನವರು ( ಈಗ ತೀರಿ ಹೋಗಿದ್ದಾರಂತೆ) real estate ಬ್ಯುಸಿನೆಸ್ ನಡೆಸುತ್ತಾರೆ. ಅನೇಕ ಬಾರಿ ಸರ್ವೇ ಹಾಗೂ ಭೂ ದಾಖಲೆ ಕಚೇರಿಯ ಮೂಲಕ ತನ್ನ family business ಗೆ ಅಗತ್ಯ ಇರುವ ಅನೇಕ land related ಮಾಹಿತಿ , ಅಂದರೆ, ಒಂದು ಭೂಮಿಯ ಫೋಡಿ, ಇನ್ನೊಂದರ ಬಗ್ಗೆ ಅದು ವ್ಯಾಜ್ಯ ಇರುವ ಭೂಮಿಯೇ ಅಥವಾ ಖರೀದಿಸಲು ಯೋಗ್ಯವೇ ಎಂಬಂತಹ ಮಾಹಿತಿಗಳನ್ನು ತಮ್ಮ ಐಎಎಸ್ ಸ್ಥಾನ ಅಧಿಕಾರದಿಂದ ಪಡೆದು ಕೊಂಡಿರುವ ಮಾಹಿತಿ ದಾಖಲೆ ಸಮೇತ ಇದ್ದು, ಇದರ ಮೇಲೆ ಕ್ರಮ ಆಗುತ್ತದೆಯೇ? ನೋಡಬೇಕು.
  16. ಅನೇಕ ಬಾರಿ ಸರ್ಕಾರ ಅಧಿಕಾರಿಗಳನ್ನು transfer ಮಾಡಿದಾಗ ಆ ಜಾಗದಲ್ಲಿ ಇದ್ದವರು ಕ್ಯಾಟ್/ಕೋರ್ಟ್ ಗೆ ಹೋಗುವುದು ಸಹಜ. ನಾನು 3 ವರ್ಷ ದೂರದ ಯಾದಗಿರಿಯಲ್ಲಿ ಕೆಲಸ ಮಾಡಿ,( senior most sp in the state, 2013 ರಲ್ಲೀ ನಾನು) ಬೆಂಗಳೂರಿಗೆ ನನಗೆ ವರ್ಗವಾದಾಗ, ಆ ಜಾಗದಲ್ಲಿ ಇದ್ದ ಅಧಿಕಾರಿ , ಪವಾರ್, ನನ್ನ ವರ್ಗಾವಣೆ ಪ್ರಶ್ನಿಸಿ ಕ್ಯಾಟ್ ಗೆ ಹೋದರು. ಆದರೆ, ರೋಹಿಣಿ ಸಿಂಧೂರಿ ಗೆ ಸಾಕ್ಷಾತ್ ಅಡ್ವೊಕೇಟ್ ಜನರಲ್ ಅವರೇ ಬಂದು ವಾದ ಮಾಡಿದರಲ್ಲ, ಮೈಸೂರು ಡಿಸಿ ವರ್ಗಾವಣೆ ವಿಷಯದಲ್ಲಿ, ಆ ಸೌಲಭ್ಯ ನನಗೇಕೆ ಸಿಗಲಿಲ್ಲ? ನನ್ನಂತಹ ಕನ್ನಡಿಗ ಅಧಿಕಾರಿಗಳು, ಹೇಗೆ ನಡೆಸಿ ಕೊಂಡರೂ ಸುಮ್ಮನೆ ಇರ್ತಾರೆ ಅಂತಲೇ? ಸ್ವತಃ ಅಡ್ವೊಕೇಟ್ ಜನರಲ್ ಹಾಜರಾಗಿ ವಾದ ಮಾಡಿದ್ದು ಈಕೆಗಲ್ಲದೆ ಮತ್ಯಾವ ಅಧಿಕಾರಿಗೂ ಈ ಸೌಲಭ್ಯ ಸಿಕ್ಕಿಲ್ಲ. ಯಾಕೆ ಈ ಮಲತಾಯಿ ಧೋರಣೆ?
  17. ಈಕೆ ಪ್ರೊಬೇಷನರಿ ಅಂತ ಇದ್ದಾಗ, ಅಲ್ಲಿಯ ಡಿಸಿ, ಹಾಗೂ ಅವರ ಪತ್ನಿ ನೆರೆಯ ಜಿಲ್ಲೆಯ ಡಿಸಿ, ಇವರಿಬ್ಬರ ಸಂಸಾರದಲ್ಲಿ ಹುಳಿ ಬಿದ್ದು ಅವರು ಬೇರ್ಪಟ್ಟಿದ್ದಾರೀಗ ಹಾಗೂ ಇದು ಈಕೆಯ ದೆಸೆಯಿಂದ ಎಂಬ ಮಾತು ಅನೇಕರ ಬಾಯಲ್ಲಿ ಕೇಳಿದ್ದೇನೆ.
  18. ಜಾಲಹಳ್ಳಿ ಯಲ್ಲಿ ಈಕೆಯ( ಪತಿಯದ್ದು ಇದ್ದರೂ ಈಕೆಯದೂ ಆಗುತ್ತದೆ) ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returns ನಲ್ಲಿ ಈ ಮನೆಯ ಉಲ್ಲೇಖ ಇರದೆ, ಬೇರೆಲ್ಲಾ ಲಂಗು ಲೊಟ್ಟು property ಬಗ್ಗೆ ವರದಿ ಕೊಟ್ಟಿದ್ದಾರೆ. ಆ ಮನೆಗೆ ಕೋಟಿಗಟ್ಟಲೆ ಇಟಲಿ ಫರ್ನೀಚರ್, 26 ಲಕ್ಷದ ಜರ್ಮನ್ appliances ( ಅದನ್ನು duty free ಮಾಡಿಸಿಕೊಳ್ಳುವ ಬಗ್ಗೆ ಚರ್ಚೆ ಇರುವ , 6 lakhs ಕೇವಲ ಬಾಗಿಲಿನ hinges ಗೆ ಖರ್ಚ್ ಮಾಡಿರುವ ಬಗ್ಗೆ ಈಕೆ ಮಾಡಿರುವ ಚಾಟ್ ಗಳ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಇದರ ಮೇಲೆ ಕೂಲಂಕುಷ ತನಿಖೆ ಆಗುವುದೇ ನೋಡಬೇಕಿದೆ.
    ಇಷ್ಟೆಲ್ಲಾ ಆದ್ರೂ, ಯಾರು ಪ್ರತಿ ಬಾರಿ ಈಕೆಯನ್ನು ತನಿಖೆಗೂ ಒಳ ಪಡಿಸದೇ ಬಚಾವ್ ಮಾಡುತ್ತಾ ಇರುವುದು. ಈಕೆ ಕೆಮ್ಮಿದ್ದೂ ಕ್ಯಾಕರಿಸಿದ್ದೂ ತಮ್ಮ TRP ಗೋಸ್ಕರ ಹಾಕುವ ಮೀಡಿಯಾ ಗಳೇ ಈಕೆಯನ್ನು ಹೀರೋ/ ಹೀರೋಯಿನ್ ಮಾಡುವ ಮೂಲಕ ಈಕೆ ಯಾವುದೇ ಶಿಕ್ಷೆಯಿಲ್ಲದೆ ಪ್ರತಿ ಬಾರಿ ಬಚಾವ್ ಆಗಿರುವುದೇ? ಅಥವಾ ಕಿಂದರಿ ಜೋಗಿ ಮಾದಿದರೀತಿಯಲ್ಲಿ ಸರ್ಕಾರದಲ್ಲಿ ಇರುವ ಪ್ರಭಾವಿಗಳು ಕಿಂದರಿ ಜೋಗಿಯ ಪಾಶಕ್ಕೆ ಸಿಲುಕಿದರೆ?
Share235Tweet147Send
ADVERTISEMENT
SakhiGeetha Reporter

SakhiGeetha Reporter

Related Posts

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

by SakhiGeetha Reporter
September 26, 2023
0

ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನಲ್ಲಿ ವಾಕ್- ಶ್ರವಣ ದೋಷವುಳ್ಳ  ವಕೀಲೆಯೊಬ್ಬರು ಸಂಕೇತ ಭಾಷೆ (ಸಂಜ್ಞೆ ಭಾಷೆ) ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿ ಡಿ...

ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

by SakhiGeetha Reporter
September 26, 2023
0

ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ಬೆಂಗಳೂರಿನಲ್ಲಿ ಬಂದ್​​ ನಡೆಯುತ್ತಿರುವುದರ ಮಧ್ಯೆಯೇ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಕಚೇರಿಯಲ್ಲಿ ಮಂಗಳವಾರ ನಡೆದ...

ಮೂರು ಡಿಸಿಎಂ ಸ್ಥಾನಕ್ಕೆ ಬೇಡಿಕೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿಎಂ ಸಿದ್ದರಾಮಯ್ಯ

ಮತ ಸೆಳೆಯಲು ಮಹಿಳಾ ಮೀಸಲಾತಿ ಮಸೂದೆ ತರುತ್ತಿದ್ದಾರೆ ಹೊರತು ಮಹಿಳೆಯರ ಮೇಲೆ ಕಾಳಜಿಯಿಂದಲ್ಲ: ಸಿದ್ದರಾಮಯ್ಯ

by SakhiGeetha Reporter
September 26, 2023
0

ಮಹಿಳಾ ಮೀಸಲಾತಿ ಬಿಲ್ ಚುನಾವಣೆಗೋಸ್ಕರ ಮಾಡಿದ್ದು. ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕರಿಸಿರುವ ಮಹಿಳಾ ಮೀಸಲಾತಿ ಮಸೂದೆ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವುದು....

ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

by SakhiGeetha Reporter
September 26, 2023
0

ಸಮಸ್ತ ಕನ್ನಡ ಜನತೆಗೆ ನಮಸ್ಕಾರ. ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು, ರೈತರು ಹೋರಾಟ ನಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ ಭಾಷೆಯ ಎಲ್ಲ...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

September 26, 2023
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

September 26, 2023
ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

September 26, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet