ಭವಿಷ್ಯವನ್ನು ತಿಳಿಯಲು ಯುಗಾದಿ ಹಾಗೂ ಮಕರ ಸಂಕ್ರಮಣ ಯೋಗ್ಯ ದಿನಗಳಾಗಿರುತ್ತವೆ. ಒಂದು ಇಡೀ ವರ್ಷದ ಫಲ ಗುರುತಿಸಬಹುದು. ರವಿ, ಮಂಗಲ, ಬುಧ, ಶುಕ್ರ ಸ್ಥಾನ ಪಲ್ಲಟ ಹೊಂದಿದಾಗ ಬದಲಾವಣೆ ನೋಡಬಹುದು. ಶನಿ, ರಾಹು, ಕೇತು, ಗುರು ಇವು ದೀರ್ಘ ಅವಧಿಯ ಪರಿಣಾಮ ಬೀರುತ್ತವೆ.
ಶನಿ ಬದಲಾವಣೆಗೆ 30 ತಿಂಗಳು, ರಾಹು ಕೇತು 18 ತಿಂಗಳು, ಗುರು 12 ತಿಂಗಳು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಅಸ್ತೋದಯ ಮತ್ತು ವಕ್ರಿ ಅವಧಿ ಸಹ ಇರುತ್ತದೆ. ಈ ಎಲ್ಲ ಎಚ್ಚರಿಕೆ ಅಂಶ ಹಿನ್ನಲೆಯಲ್ಲಿ ರಾಶಿ ಭವಿಷ್ಯಕ್ಕೆ ಬದಲು ಕಂದಾಯ ಫಲ ನೋಡುವುದು ಸೂಕ್ತ ಆಗಿರುತ್ತದೆ. ಆದಾಯ ವ್ಯಯ ನೋಡುವುದು ಸಹ ಯೋಗ್ಯ ಆಗಿರುತ್ತದೆ. ಇವುಗಳ ಆಧಾರ ಮೇರೆಗೆ –
*ಮೇಷ* :ಮಿಶ್ರ ಫಲ ಇದೆ. ಎಷ್ಟು ಗಳಿಸುವಿರೋ ಅಷ್ಟೇ ಖರ್ಚು ಮಾಡುವಿರಿ. ಆರೋಗ್ಯ ಸಾಧಾರಣ. ಸುಖ ಜೀವನ ನಡೆಸುವಿರಿ
*ವೃಷಭ* : ಆದಾಯ ಚೆನ್ನಾಗಿದೆ. ಸ್ವಲ್ಪ ಉಳಿತಾಯವನ್ನು ಮಾಡುವಿರಿ. ಆರೋಗ್ಯ ಉತ್ತಮ. ಸುಖ ಜೀವನಕ್ಕೆ ತೊಂದರೆ ಏನಿಲ್ಲ.
*ಮಿಥುನ* : ಹಣಕಾಸು ವಿಷಯದಲ್ಲಿ ಮುಗ್ಗಟ್ಟು ಉಂಟಾಗಬಹುದು. ಎಚ್ಚರಿಕೆ ಇರಲಿ. ಆರೋಗ್ಯ ಕಡೆ ಗಮನ ಕೊಡುವುದು ಅತ್ಯಗತ್ಯ.
*ಕರ್ಕ* :ಮಿಶ್ರ ಫಲ. ಹಣವು ಬಂದಷ್ಟು ಎಲ್ಲ ಖರ್ಚುಗುತ್ತದೆ. ಆರೋಗ್ಯದಲ್ಲಿ ಏರು ಪೇರು ಕಾಣಬಹುದು
*ಸಿoಹ*: ಈ ವರ್ಷ ಆರ್ಥಿಕ ಸುಖ ನಿಮಗಿದೆ. ಬಹಳಷ್ಟು ಸಂಪತ್ತು, ಹಣ ಹರಿದು ಬರಲಿದೆ. ಆರೋಗ್ಯದ ಕಡೆ ಗಮನ ಕೊಡಿ. ಸುಖ ದುಃಖ ಸಮಾನವಾಗಿ ಸ್ವೀಕರಿಸಿದರೆ ಒಳ್ಳೆಯದು
*ಕನ್ಯಾ* :ಹಣಕಾಸು ವಿಷಯದಲ್ಲಿ ಮುಗ್ಗಟ್ಟು ಉಂಟಾಗಬಹುದು. ಎಚ್ಚರಿಕೆ ಇರಲಿ. ಆರೋಗ್ಯ ಕಡೆ ಗಮನ ಕೊಡುವುದು ಅತ್ಯಗತ್ಯ.
*ತುಲಾ* :ಆದಾಯ ಚೆನ್ನಾಗಿದೆ. ಸ್ವಲ್ಪ ಉಳಿತಾಯವನ್ನು ಮಾಡುವಿರಿ. ಆರೋಗ್ಯ ಉತ್ತಮ. ಸುಖ ಜೀವನಕ್ಕೆ ತೊಂದರೆ ಏನಿಲ್ಲ.
*ವೃಶ್ಚಿಕ* :ಮಿಶ್ರ ಫಲ ಇದೆ. ಎಷ್ಟು ಗಳಿಸುವಿರೋ ಅಷ್ಟೇ ಖರ್ಚು ಮಾಡುವಿರಿ. ಆರೋಗ್ಯ ಸಾಧಾರಣ. ಸುಖ ಜೀವನ ನಡೆಸುವಿರಿ
*ಧನು* :ಖರ್ಚಿನ ಮೇಲೆ ನಿಯಂತ್ರಣ ಇರಿಸುವ ಅವಶ್ಯಕತೆ ಇದೆ.ಆರೋಗ್ಯ ತೃಪ್ತಿಕರ. ಮಿಶ್ರ ಫಲ
*ಮಕರ & ಕುಂಭ* :ಆದಾಯದ ಅರ್ಧದಷ್ಟು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ ಕೊಡಿ. ಮಿಶ್ರ ಫಲ ಇವೆ
ಮೀನ :ಖರ್ಚಿನ ಮೇಲೆ ನಿಯಂತ್ರಣ ಇರಿಸುವ ಅವಶ್ಯಕತೆ ಇದೆ.ಆರೋಗ್ಯ ತೃಪ್ತಿಕರ. ಮಿಶ್ರ ಫಲ
ಗ್ರಹಗತಿಗಳು ಅದೇನೇ ಇರಲಿ. ಸದ್ಭಾವನೆ, ಸದಾಚಾರ, ಸದ್ಗುಣ, ಸಹೃದಯತೆ ನಾವೂ ಬೆಳೆಸಿಕೊಂಡರೆ ಸಮ ಚಿತ್ತ ಹೊಂದಿದರೆ ಯಾವ ಕೆಡುಕು ನಮ್ಮನ್ನು ಕಾಡುವುದಿಲ್ಲ. ಸರ್ವರಿಗೂ ಒಳಿತನ್ನೇ ಬಯಸೋಣ. ಅದೃಷ್ಟ ಇದ್ದವರು ಆದಿಲ್ಲದವರ ಕೈ ಹಿಡಿದು ಮೇಲೆ ಎತ್ತಿದರೆ ಅದರಷ್ಟು ಪುಣ್ಯ ಯಾವ ದೇವರೂ ದಯಪಾಲಿಸಲಾರ. ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಪತಿಗೆ ಪತ್ನಿಯ ಅದೃಷ್ಟದಲ್ಲಿ ಪಾಲು ಸಿಗಬಹುದು. ತಂದೆ ತಾಯಿಗೆ ಮಕ್ಕಳ ಅದೃಷ್ಟ ಒಳಿತು ಮಾಡಬಹುದು. ಇಡೀ ಕುಟುಂಬ ಹಾಗೂ ರಕ್ತ ಸಂಬಂಧಿಗಳ ಭವಿಷ್ಯ ನಮ್ಮ ನಡೆಯನ್ನು ನಿರ್ಧರಿಸಬಲ್ಲುದು.
ಆದುದರಿಂದ ಕೇವಲ ಪ್ರಮುಖ ಅಂಶಗಳನ್ನು ಮುಂದಿರಿಸಲಾಗಿದೆ. ಇದು ಮಾರ್ಗ ಸೂಚಿ ಎಂದು ತಿಳಿಯುವುದು