ಗೆದ್ದ ಕಾಂಗ್ರೆಸ್ ಹಿಗ್ಗಿ ಹೀರೆಕಾಯಿ ಆಗಬೇಕಿಲ್ಲ. ಪರ್ಯಾಯ ವ್ಯವಸ್ಥೆ ಬಲವಾಗಿ ಇಲ್ಲದ ಕಾರಣವಾಗಿ ಕಾಂಗ್ರೆಸ್ಸಿಗೆ ಮತದಾರ ಮತ ಹಾಕಿದ್ದಾನೆ. ಮತದಾರ ಎಲ್ಲ ಪಕ್ಷಗಳ ಸರಕಾರ ನೋಡಿದ್ದಾನೆ. ಈ ಬಿಜೆಪಿ ಮಖಾಡೆ ಮಲಗಲು ಕೆಳಗೆ ತಿಳಿಸಿರುವ ಅಂಶ ಮುಖ್ಯ ಕಾರಣ ಆದವು.
1)ಕರೋನ ಕಾಲದಲ್ಲಿ ಕಂಡು ಬಂದ ಭ್ರಸ್ಟತನ… ಬೆಂಗಳೂರಿನಲ್ಲಿ ಹತ್ತು ಸಾವಿರ ಹಾಸಿಗೆಯ ಆಸ್ಪತ್ರೆ ಸ್ಥಾಪಿಸಿದ್ದು ಮಂಗ ಮಾಯವಾಯ್ತು. ನಿಜವಾಗಿ ಅನಾಥ ಆದ ಕುಟುಂಬಗಳಿಗೆ ಸಲ್ಲಬೇಕಾದ ಪರಿಹಾರ ಘೋಷಣೆ ಆಗಿಯೇ ಉಳಿಯಿತು. ಸಮರ್ಪಕ ವಿತರಣೆ ಆಗಲಿಲ್ಲ. ಕೋವಿಡ್ ಸಮಯದಲ್ಲಿ ನೌಕರಿ ಮಾಡಿ ಸತ್ತವರಿಗೆ ಮೂವತ್ತು ಲಕ್ಷ ಪರಿಹಾರದ ಅಭಯ ಈಡೇರಲೇ ಇಲ್ಲ. ಹೀಗಿರುವಾಗ ನೊಂದ ಸುಮಾರು 8ರಿಂದ 10 ಲಕ್ಷ ಕುಟುಂಬಗಳು ವಿರೋಧಿ ಧೋರಣೆ ತಾಳಿದವು
2)ಸರಕಾರಿ ಹಾಗೂ ಆರೆ ಸರಕಾರಿ ನೌಕರರನ್ನು
ನಿರ್ಲಕ್ಷಿಸಿದ್ದು. ಕರೋನ ನಂತರ ಕಾಲದಲ್ಲಿ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಬೇಡಿಕೆ ಆಲಿಸಿ ಪೂರ್ಣ ಮಾಡಬೇಕಿತ್ತು. ಅಂಗನವಾಡಿ, ksrtc, KEB ಮೊದಲಾದ ಇಲಾಖೆ ನೌಕರರ ಬೇಡಿಕೆಗಳನ್ನು ಏಕ ಪಕ್ಷವಾಗಿ ನಿರ್ಧರಿಸಿ ನೌಕರ ವರ್ಗದ ಕಣ್ಣು ಕೆಂಪು ಮಾಡಿತು. ಸುಮಾರು 5 ಲಕ್ಷ ನೌಕರ ಕುಟುಂಬಗಳು ಇದರಿಂದ ಅತೃಪ್ತ ಆದವು.
3)ಸಮಯಕ್ಕೆ ಸರಿಯಾಗಿ ವೇತನ, ತುಟ್ಟಿಭತ್ಯೆ ಕೊಡುವಲ್ಲಿ ವಿಫಲ ಆಯ್ತು. ನಿವೃತ್ತರಿಗೆ ಕೊಡಬೇಕಾದ ಆರ್ಥಿಕ ಸೌಲಭ್ಯ ನೀಡುವಲ್ಲಿ ವಿಳಂಬ ಮಾಡಿತು. ಆದರೆ ಕೋಟಿ ಕೋಟಿ ಯೋಜನೆಗಳ ಭ್ರಮೆ ಹುಟ್ಟಿಸಿತು.
4)ನಿವೃತ್ತರ ಪಿಂಚಣಿ ಯೋಜನೆ ಬಗ್ಗೆ ಸರಿಯಾದ ವ್ಯವಸ್ಥೆ ಕೈಗೊಳ್ಳದೆ ವೃದ್ಧರು ಚಪ್ಪಲಿ ಸವೆಸುವ ಹಾಗೆ ಮಾಡಿತು. ನನಗೆ ತಿಳಿದ ಮಟ್ಟಿಗೆ ನಿವೃತ್ತ ಮತ್ತು ಹಿರಿಯ ನಾಗರಿಕರು ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಹಾಗಾಯಿತು.
5)ಇನ್ನು ಯುವ ಜನತೆಗೆ ಇವರಿಂದ ಯಾವ ಲಾಭ ಸಿಗಲಿಲ್ಲ. ಕೇಂದ್ರದ ಯೋಜನೆಗಳನ್ನೇ ನಮ್ಮ ರಾಜ್ಯದ ಯೋಜನೆ ಎಂದು ಬಜೆಟ್ ಮಂದಿಸಿದರೆ ಹೊರತು ಬಜೆಟ್ ಅಂಶಗಳಲ್ಲಿ ಯಾವುದನ್ನೂ ಜಾರಿ ತರದೇ ಚುನಾವಣೆ ಪ್ರಚಾರಕ್ಕೆ ಮುಂದಾಗಿ ವಿಳಂಬ ನೀತಿ ಅನುಸರಿಸಿತು
6)ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ವಿದ್ವೇಷ ಹುಟ್ಟುವುದಕ್ಕೆ ಆಸ್ಪದ ನೀಡಿತು.
7) ಲಿಂಗಾಯತ, ವೀರಶೈವ, ದಲಿತ, ಲಂಬಾನಿ ಮುಂತಾದ ಧರ್ಮಗಳ ಮೀಸಲಾತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಪ್ರತಿಯೊಂದು ಧರ್ಮದ ವಿರೋಧ ಕಟ್ಟಿಕೊಂಡಿತು. ಬ್ರಾಹ್ಮಣ, ಜೈನ ಮೊದಲಾದ ಧರ್ಮಗಳ ಕೆಂಗಣ್ಣಿಗೆ ಗುರಿ ಆದರು.
8)ಶ್ರೀರಾಮುಲು ಐಷಾರಾಮಿ ಬಸ್ ಖರೀದಿ ಮೂಲಕ ಕಮಿಷನ್ ಪಡೆದರೆ ಈಶ್ವರಪ್ಪ ವಿರೂಪಾಕ್ಷಪ್ಪ ಲಂಚ ಆರೋಪಕ್ಕೆ ನೇರ ಸಿಕ್ಕಿ ಹಾಕಿಕೊಂಡರು.
9)ಯಡಿಯೂರಪ್ಪ ಅವರನ್ನು ಇಳಿಸಿದ್ದು ದೊಡ್ಡ ಪ್ರಮಾದ. ಈ ವ್ಯಕ್ತಿ ಏನೇ ಬಂದರೂ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದರು.
10)ಗಡಿ ಮತ್ತು ನೀರಾವರಿ ವಿಷಯಗಳಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ.
11)ಡಬಲ್ ಇಂಜಿನ ಸರಕಾರ ಅಂತ ಹೇಳುತ್ತಾ ಕೇಂದ್ರದ ಪೂಜಾ ಮಂತ್ರ ಪಠಣ ಮಾಡಿತೇ ಹೊರತು ಒಂದು ರಾಜ್ಯದ ಜವಾಬ್ದಾರಿ ತನ್ನ ಮೇಲೆ ಇದೆ ಎನ್ನುವುದನ್ನೇ ಮರೆಯಿತು.
12)ಗುಡಿ ಗುಂಡಾರ ಕಟ್ಟಿ ಖಜಾನೆ ಖಾಲಿ ಮಾಡುವುದರ ಬದಲು ಜನೋಪಯೋಗಿ ಕೆಲಸಗಳಿಗೆ, ಕಾರ್ಯಗಳಿಗೆ, ಉಪಯೋಗಿಸಲು ಸಾಧ್ಯ ಇತ್ತು.
13)ಅಡುಗೆ ಅನಿಲ, ಇಂಧನ, ಅಡುಗೆ ಎಣ್ಣೆ ಬೆಲೆ ನಿಯಂತ್ರಿಸಲು ಪ್ರಯತ್ನ ಮಾಡಲೇ ಇಲ್ಲ. ಇದು ಮಹಿಳಾ ಮತದಾರರನ್ನು ಕೆರಳಿಸಿತು.
14)ರಾಜ್ಯದ ಚುನಾವಣೆಯಲ್ಲಿ ಕೇಂದ್ರ ಹಸ್ತಕ್ಷೇಪ ಮಾಡತಾಕ್ಕದ್ದಲ್ಲ. ಏಕೆಂದರೆ ಕೇಂದ್ರಕ್ಕೆ ಸ್ಥಳೀಯ ಸಮಸ್ಯೆ ಅರ್ಥ ಆಗುವುದಿಲ್ಲ. ಇಲ್ಲಿ ಯಾರನ್ನೂ ಎಲ್ಲಿ ನಿಲ್ಲಿಸಿದರೆ ಗೆಲುವು ಸಾಧ್ಯ ಅನ್ನುವ ಸ್ಪಷ್ಟ ಚಿತ್ರಣ ಕೇಂದ್ರಕ್ಕೆ ಇರುವುದಿಲ್ಲ. ರಾಜ್ಯ ನಾಯಕರ ಸಲಹೆ ಮೀರಿ ಬೇರೆಯವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಸುಮಾರು 15ರಿಂದ 20 ಸ್ಥಾನ ಕಳೆದುಕೊಳ್ಳಬೇಕಾಯಿತು
15)ಪಠ್ಯ ವಿಷಯಗಳ ಬಗ್ಗೆ ಅನಗತ್ಯ ವಾದ ವಿವಾದ.
ಹೀಗೆ ಮಕ್ಕಳಾದಿಯಾಗಿ ಯುವಕರು, ಮಹಿಳೆಯರು, ನೌಕರರು, ವೃದ್ಧರು, ಎಲ್ಲರ ಸಹಕಾರ ಕಳೆದುಕೊಂಡ
ಫಲವಾಗಿ ಬಿಜೆಪಿ ಇವತ್ತು ಕಂಬಳಿ ಹೊದ್ದು ಮಲಗುವ ಪರಿಸ್ಥಿತಿ ಬಂದಿದೆ