ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…
ರಾಜಕಾರಣಿಗಳಿಗೆ ಸಂಸಾರದಲ್ಲೊಂದು ಕಮಿಟ್ಮೆಂಟ್ ಇಲ್ಲ, ಅವರ ಪಂಚೆಯೂ ಗಟ್ಟಿ ಇಲ್ಲ ಅನ್ನುವುದು ಹಲವು ಸಲ ಸಾಬೀತಾಗಿದೆ. ಹಾಗಂತ ಎಲ್ಲರಲ್ಲ. ಇದಕ್ಕೆ ಸಾಕ್ಷಿ ವರ್ಷಕ್ಕೆ ನಾಲ್ಕು ಐದು ಅನ್ನುವಂತೆ ಬಿಡುಗಡೆಯಾಗುತ್ತಿರುವ ಸಿಡಿಗಳು. ಆದರೆ ಬಿಡುಗಡೆಯಾಗದೆ ಡೀಲ್ ಲೆಕ್ಕದಲ್ಲಿ ಮುಚ್ಚಿ ಹೋಗುವ ಸಿಡಿಗಳು ಎಷ್ಟಿದೆಯೋ ಗೊತ್ತಿಲ್ಲ. ...