ಶ್ರೀಮಂತ ಹರಳಯ್ಯ…!
ಅಣ್ಣನವರ ಮಹಾಮನೆಯಿಂದ ಕರೆ ಬಂದಿದೆ ವಿಷಯವೇನೆಂದು ತಿಳಿಯುತ್ತಿಲ್ಲ "ತುರ್ತಾಗಿ ಮಾತನಾಡಬೇಕು ಹರಳಯ್ಯನವರೇ ಕುಟುಂಬ ಸಮೇತರಾಗಿ ಬನ್ನಿ" ಎಂದು ಹೇಳಿ ಕಳುಹಿಸಿದ್ದಾರೆ ಬಸವಣ್ಣನವರು !! ಚರ್ಮವನ್ನು ಹದ ಮಾಡಿ ಚಪ್ಪಲಿಯನ್ನು ಹೊಲಿಯುವುದು ನಮ್ಮ ಕುಲಕಸುಬು. ನಾನು ಮುಂಚೆ ಬಾಗಡೆ ದೇಶದ ಸಾಮಂತರ ಬಳಿ ಚರ್ಮಕಾರನಾಗಿ ಕೆಲಸ ಮಾಡುತ್ತಿದ್ದೆ. ನಾನು ನನ್ನ ಪತ್ನಿ ಕಲ್ಯಾಣಿ ...