ಅದಮ್ಯ ಚೇತನದ ಚೈತನ್ಯ – ತೇಜಸ್ವಿನಿ ಅನಂತಕುಮಾರ್
ರಾಜಕೀಯದಲ್ಲಿ ಸಕ್ರಿಯರಾಗಿರುವ ಪ್ರತಿಯೊಬ್ಬ ಪುರುಷನಿಗೂ ಆತನ ಹೆಂಡತಿಯಿಂದ ಸೂಕ್ತ ಬೆಂಬಲ ಸಿಕ್ಕಿದ್ದೇ ಆದರೆ ಆತನ ರಾಜಕೀಯ ಜೀವನ ಸುಗಮವಾಗಿ ಸಾಗಬಲ್ಲದು. ಆದರ್ಶಗಳನ್ನ ನಾವು ಬೆಳೆಸಿಕೊಳ್ಳಬಹುದು ಆದರೆ ಅದೇ ಆದರ್ಶಗಳನ್ನ ನಮ್ಮ ಸಂಗಾತಿಯೂ ಪಾಲಿಸಬೇಕೆಂದು ನಿಬಂಧಿಸುವಂತಿಲ್ಲ. ಅವರವರ ಬದುಕಿನ ಹಾದಿಯಂತೆ ಆದರ್ಶಗಳೂ ಬಂದಿರುತ್ತವೆ. ...