ಪೆನುಕೊಂಡೆ ; ಕಲ್ಲು ಕಲ್ಲೂ ಕಥೆ ಹೇಳುವ ಊರು… ಪ್ರತೀ ಕನ್ನಡಿಗನೂ ಭೇಟಿ ಕೊಡಲೇ ಬೇಕು ಜರೂರು…
ಶ್ರೀಕೃಷ್ಣದೇವರಾಯನ ಎರಡನೇ ರಾಜಧಾನಿ ಎಂದೇ ಖ್ಯಾತಿ... ಅದನ್ನು ಪುಷ್ಟಿಕರಿಸಲೊ ಎಂಬಂತೆ ಊರಿನ ಹೆಬ್ಬಾಗಿಲಿನಲ್ಲೇ ಇಪ್ಪತ್ತು ಅಡಿ ಎತ್ತರದ ರಾಯರ ಭವ್ಯ ಪ್ರತಿಮೆ... ಬಹುದೂರಕ್ಕೆ ಕಾಣುವ ಕೋಟೆ ಕೊತ್ತಲಗಳು... ಅದಕ್ಕೆ ಉಪಯೋಗಿಸಿದ ರಕ್ಕಸ ಗಾತ್ರದ ಕಲ್ಲುಗಳು... ಮಾನವ ಮಾತ್ರನಿಂದ ಎತ್ತಲು ಸಾಧ್ಯವೇ ಇಲ್ಲವೇನೋ ...