ಯಾರ ಮಾತನ್ನು ಲೆಕ್ಕಿಸದೆ ಕಾಫಿ ಶಾಪ್ ತೆಗೆಯುವ ನಿರ್ಧಾರ ಮಾಡಿ ಮುಂಬೈಗೆ ಬಂದಾಗಿತ್ತು. ಮಹಾಮಳೆಯ ಅವಾಂತರವನ್ನು ಕೂಡ ಸಹಿಸಿ ಕೊಂಡು,ಕಾಫಿ shop ಶುರುವಾಯಿತು .ಮುಂದಿನದ್ದು ನಾವು ಅಂದುಕೊAಡಷ್ಟು ಸುಲಭವಾಗಿರಲಿಲ್ಲ.ನಮಗೋ ವ್ಯವಹಾರವೆ ಹೊಸದು, ಪ್ರದೀಪ್ ಬಿಟ್ಟರೆ ಮಂಡ್ಯದ ಒಂದು ಹಳ್ಳಿಯಿಂದ ಬಂದ ನಮಗ್ಯಾರಿಗು ಕನ್ನಡ ಬಿಟ್ಟುಬೇರೆ ಭಾಷೆಯೇ ಬರುತ್ತಿರಲಿಲ್ಲ. Documentation, taste, hygiene, attitude, and. speed ಎಂಬ ವಿಷಯಗಳ ಬಗ್ಗೆ customer ಯಿಂದ ಪ್ರಶ್ನೆಗಳ ಸುರಿಮಳೆ.
ಇನ್ನೊಂದು ಕಡೆ ದಿನ ನಿತ್ಯವೂ ಬೇಕಾದಂತ ವಸ್ತುಗಳ ನಿರ್ವಹಣೆ , ವಿಕ್ರೋಲಿ ವೆಸ್ಟ ಎಂಬ ಸ್ಲಮ್ ಪ್ರದೇಶದಲ್ಲಿ ವಾಸ್ತವ್ಯ,ವಿಪರೀತ ಮಳೆ,ಮಳೆಯಲ್ಲು ಸೆಕೆ,ಹೊಸ ವಾತಾವರಣ, ಒತ್ತಡ ಮತ್ತು ಆಯಾಸ ದಿಂದ ಎಲ್ಲರಿಗೂ ಆರೋಗ್ಯದಲ್ಲಿ ಏರುಪೇರು. ಈ ಮಧ್ಯೆ ಮನೆಯಿಂದ ಸಾವಿನ ಸುದ್ದಿ, ಮಳೆಯ ಅವ್ಯವಸ್ಥೆ ಯಿಂದ ಹಿಂದಿರುಗಲಾಗದ ಪರಿಸ್ಥಿತ
ಸಾಕುಸಾಕಪ್ಪ ಎನ್ನುವಂತಾಗಿತ್ತು ನಮ್ಮೆಲ್ಲರ ಪರಿಸ್ಥಿತಿ , ಆಗಲೇ ಪುಟ್ಟರಾಜು ಮತ್ತು ಮಹೇಶ ಇನ್ನು ನಮ್ಮ ಕೈಯಿಂದ ಆಗುವುದಿಲ್ಲ ನಾವು ಊರಿಗೆ ಹಿಂದಿರುಗಲೇ ಬೇಕು ಎಂದು ಹಟ ಹಿಡಿದು ಕುಳಿತರು,ದೇವರ ಮೇಲೆ ಭಾರ ಹಾಕಿ ಕುರ್ಲಾ ಸ್ಟೇಷನ್ನಲ್ಲಿ ಬೀಳ್ಕೊಟ್ಟು ಬಂದೆವು..
ಇನ್ನು ಉಮೇಶ, ಪ್ರದೀಪ್, ಕಾರ್ತಿಕ್ ಮತ್ತು ನಾನು ಅಷ್ಟೇ ಉಳಿದೆವು. ಅಲ್ಲೇ ಇಬ್ಬರು ಸ್ಥಳೀಯ ಹುಡುಗರನ್ನು ಸೇರಿಸಿ ಕೊಂಡು ಇನ್ನೂ ಒಂದು ವಾರ ಕಷ್ಟದಿಂದ ನೂಕಿದೆವು,ಈಗ ಊರಿಗೆ ಮುಖಮಾಡುವ ಸರದಿ ಪ್ರದೀಪ್ ನದು,ಈ ಸಾರಿ ಸ್ವಲ್ಪ ಗಾಬರಿಯೇ ಆಗಿತ್ತು, ಹಿಂದಿ ಮತ್ತು ಇಂಗ್ಲಿಷ್ ಗೊತ್ತಿಲ್ಲದ ನಮಗೆ ಮುಂದೇನು ಎನ್ನುವ ತಳಮಳ, ಪ್ರದೀಪ್ ಬೀಳ್ಕೋಡಲು ದಾದರ್ ಸ್ಟೇಷನ್ ಗೆ ಹೋಗಿದ್ದೆ,ನಿಮ್ಮ ಕೈಯಲ್ಲಿ ಆಗಲ್ಲ ಬನ್ನಿ,ಬೆಂಗಳೂರಿನಲ್ಲಿಯೇ ಏನಾದರೂ ಮಾಡಿದರಾಯಿತು ಎಂದು ಬುದ್ದಿ ಹೇಳಿದರು.
ನನಗೇಕೊ ಮನಸ್ಸು ಒಪ್ಪಲಿಲ್ಲ,ಬಂದಿದ್ದಾಗಿದೆ ಏನಾದರು ಮಾಡಿಯೇ ತೀರಬೇಕು ಎಂದು ನಿರ್ಧರಿಸಿದೆ.
ಅಂದು ಮಾಡಿದ ಆ ನಿರ್ಧಾರವೇ , ಇಂದು ಸಾವಿರಾರು ಜನರಿಗೆ ಬದುಕನ್ನು ಕೊಟ್ಟಿದೆ, ಆ ಒಂದು shop ಇಂದು ನೂರಾರಗಿದೆ, ಮುಂಬೈನಲ್ಲಿ ಶುರುವಾದ ನಮ್ಮ ಪ್ರಯಾಣ ಇಂದು ಪುಣೆ, ಹೈಡ್ರಾಬಾದ್, ದೆಹಲಿ, ಭುವನೇಶ್ವರ್, ಛಂಡಿಘರ್, ಜೈಪುರ್, ಮೈಸೂರು, ಮತ್ತು ತ್ರಿವೇಂಡ್ರಮ್ ತಲುಪಿದೆ……
ಯಶಸ್ಸು ಸದಾ ರಿಸ್ಕುಗಳನ್ನೇ
ಒಳಗೊಂಡಿರುತ್ತದೆ. ಹೆಜ್ಜೆಗಳನ್ನು
ಮುAದಿಡುವ ರಿಸ್ಕ್ ತೆಗೆದುಕೊಳ್ಳುವವರು
ಮಾತ್ರ ಚಲಿಸಲು ಸಾಧ್ಯ.
To Be Continued………..
-ಮಹಾದೇವ ಪ್ರಸಾದ್