sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತು

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2026 voter-list; ಇಂದಿನಿಂದಲೇ (ಜೂನ್ 30) ಕರ್ನಾಟಕದಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ! ಮನೆ ಮನೆಗೆ ಬರಲಿದ್ದಾರೆ ಅಧಿಕಾರಿಗಳು: ಹುಷಾರ್, ಒಂದು ಸಣ್ಣ ತಪ್ಪಿಗೂ ವೋಟರ್ ಐಡಿ ಡಿಲೀಟ್ ಆದೀತು!

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2026 voter-list; ಕರ್ನಾಟಕದ ಮತದಾರರಿಗೆ ಚುನಾವಣಾ ಆಯೋಗವು ಮಹತ್ವದ ಸುದ್ದಿಯೊಂದನ್ನು ನೀಡಿದೆ. ರಾಜ್ಯಾದ್ಯಂತ ಇಂದಿನಿಂದ (ಜೂನ್ 30, 2026) “ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ” (Special Intensive Revision – SIR) ಪ್ರಕ್ರಿಯೆಯು ಅಧಿಕೃತವಾಗಿ ಆರಂಭವಾಗಿದೆ. ಮುಂದಿನ 30 ದಿನಗಳ ಕಾಲ ಅಂದರೆ ಜುಲೈ 29 ರವರೆಗೆ ಈ ಕಠಿಣ ಪರಿಶೀಲನಾ ಕಾರ್ಯ ನಡೆಯಲಿದೆ.

ಈ ಬಾರಿ ಆಯೋಗವು ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ನಕಲಿ ಮತ್ತು ಲಭ್ಯವಿಲ್ಲದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಿದೆ. ನಿಮ್ಮ ಬಳಿ ವೋಟರ್ ಐಡಿ ಇದ್ದರೂ ಸಹ ಈ ಕೆಳಗಿನ ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ ಹೆಸರು ಪಟ್ಟಿಯಿಂದ ಕೈಬಿಡಲಾಗುವುದು.

ಮನೆ ಮನೆಗೆ ಬರಲಿದ್ದಾರೆ ಬಿಎಲ್‌ಒ (BLO) ಅಧಿಕಾರಿಗಳು:

ಇಂದಿನಿಂದ ಬೂತ್ ಮಟ್ಟದ ಅಧಿಕಾರಿಗಳು (BLO) ನಿಮ್ಮ ಮನೆಗೆ ವೈಯಕ್ತಿಕವಾಗಿ ಭೇಟಿ ನೀಡಲಿದ್ದಾರೆ. ಅವರು ಪರಿಶೀಲನಾ ಫಾರ್ಮ್‌ಗಳನ್ನು ವಿತರಿಸಿ, ನಿಮ್ಮ ಕುಟುಂಬದ ವಿವರಗಳನ್ನು ಪಡೆದುಕೊಳ್ಳಲಿದ್ದಾರೆ.

  • ಪರ್ಪಲ್ ಸ್ಟಿಕ್ಕರ್: ಅಧಿಕಾರಿಗಳು ನಿಮ್ಮ ಮನೆಗೆ ಬಂದು ಫಾರ್ಮ್ ನೀಡಿದ ತಕ್ಷಣ ಮನೆಗೆ ನೇರಳೆ (Purple) ಬಣ್ಣದ ಚೌಕಾಕಾರದ ಸ್ಟಿಕ್ಕರ್ ಅಂಟಿಸುತ್ತಾರೆ.
  • ರೆಡ್ ಸ್ಟಿಕ್ಕರ್: ಒಂದು ವೇಳೆ ಅಧಿಕಾರಿಗಳು ಬಂದಾಗ ಮನೆ ಬೀಗ ಹಾಕಿದ್ದರೆ, ಕೆಂಪು (Red) ಬಣ್ಣದ ದುಂಡಗಿನ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಅಧಿಕಾರಿಗಳು ಒಟ್ಟು 3 ಬಾರಿ ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ.

ವೋಟರ್ ಐಡಿ ಡಿಲೀಟ್ ಆಗಲು ಪ್ರಮುಖ ಕಾರಣಗಳು:

  1. ಪ್ರೊಜೆನಿ ಮ್ಯಾಪಿಂಗ್ (Family Tree Linking): ನಿಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನು (ತಂದೆ, ತಾಯಿ ಅಥವಾ ಪತಿ) ಪರಸ್ಪರ ಲಿಂಕ್ ಮಾಡಲಾಗುತ್ತದೆ. ಆಧಾರ್ ಮತ್ತು ವೋಟರ್ ಐಡಿಯಲ್ಲಿ ಹೆಸರು ಅಥವಾ ಇನಿಷಿಯಲ್ ಮ್ಯಾಚ್ ಆಗದಿದ್ದರೆ ತೊಂದರೆ ಗ್ಯಾರಂಟಿ
  2. ಬಾಡಿಗೆದಾರರು ಮತ್ತು ವಲಸಿಗರು: ಇತ್ತೀಚೆಗೆ ಮನೆ ಬದಲಾಯಿಸಿ ಹಳೆಯ ವಿಳಾಸದಲ್ಲೇ ವೋಟರ್ ಐಡಿ ಹೊಂದಿರುವವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.
  3. ಸೇರ್ಪಡೆ ಮತ್ತು ತಿದ್ದುಪಡಿ: ಹೊಸದಾಗಿ 18 ವರ್ಷ ತುಂಬಿದವರು ಹೆಸರು ಸೇರಿಸಲು ಫಾರ್ಮ್ 6 ಮತ್ತು ಹೆಸರು, ವಿಳಾಸ ತಿದ್ದುಪಡಿಗಾಗಿ ಫಾರ್ಮ್ 8 ಅನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಬಹುದು ಅಥವಾ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಅಧಿಕಾರಿಗಳು ಮನೆಗೆ ಬಂದಾಗ ಸೂಕ್ತ ಆಧಾರ್ ಕಾರ್ಡ್ ಅಥವಾ ವಿಳಾಸದ ದಾಖಲೆಗಳನ್ನು ನೀಡಿ ನಿಮ್ಮ ವೋಟರ್ ಐಡಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ.

Leave a Reply

Your email address will not be published. Required fields are marked *