sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತುPolitics

ಚೆನ್ನಮ್ಮ ದೇವೇಗೌಡ ಅಂತ್ಯಕ್ರಿಯೆ ವೇಳಾಪಟ್ಟಿ ; ಚೆನ್ನಮ್ಮ ದೇವೇಗೌಡ ಅಂತಿಮ ಯಾತ್ರೆಯ ಸಂಪೂರ್ಣ ವೇಳಾಪಟ್ಟಿ: ಯಾವ ಮಾರ್ಗದ ಮೂಲಕ ಸಾಗಲಿದೆ? ಇಲ್ಲಿದೆ ವಿವರ

ಚೆನ್ನಮ್ಮ ದೇವೇಗೌಡ ಅಂತ್ಯಕ್ರಿಯೆ ವೇಳಾಪಟ್ಟಿ; ನಿಧನರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆಯ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದೆ. ಸಾರ್ವಜನಿಕರು ಮತ್ತು ಅಭಿಮಾನಿಗಳ ದರ್ಶನ ಹಾಗೂ ಅಂತಿಮ ಸಂಸ್ಕಾರದ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ:

ಬೆಂಗಳೂರಿನಲ್ಲಿ ಅಂತಿಮ ದರ್ಶನ ಮತ್ತು ನಿರ್ಗಮನ:

  • ದಿನಾಂಕ ಮತ್ತು ಸಮಯ: 19-07-2026 ಭಾನುವಾರ, ಬೆಳಗ್ಗೆ 7:00 ರಿಂದ 11:00 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
  • ಸ್ಥಳ: ಶ್ರೀ ಎಚ್.ಡಿ. ದೇವೇಗೌಡರ ನಿವಾಸ, ಪದ್ಮನಾಭನಗರ, ಬೆಂಗಳೂರು.
  • ನಿರ್ಗಮನ: ಬೆಳಗ್ಗೆ 11:05 ಗಂಟೆಗೆ ಬೆಂಗಳೂರಿನ ನಿವಾಸದಿಂದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಲಿದೆ.

ಅಂತಿಮ ಯಾತ್ರೆ ಸಾಗುವ ಮಾರ್ಗ (ಬೆಂಗಳೂರು ಟು ಹೊಳೆನರಸೀಪುರ):

ಬೆಂಗಳೂರಿನಿಂದ ಹೊರಡುವ ಅಂತಿಮ ಯಾತ್ರೆಯು ಈ ಕೆಳಗಿನ ಪ್ರಮುಖ ಮಾರ್ಗಗಳ ಮೂಲಕ ಹಾದು ಹೋಗಲಿದೆ:

​ನೆಲಮಂಗಲ ಕ್ರಾಸ್ ➔ ಸೋಲೂರು ಕ್ರಾಸ್ ➔ ಕುಣಿಗಲ್ ಕ್ರಾಸ್ ➔ ಬೆಳ್ಳೂರು ಕ್ರಾಸ್ ➔ ಕದಬಳ್ಳಿ ಕ್ರಾಸ್ ➔ ಹಿರಿಸಾವೆ ಕ್ರಾಸ್ ➔ ಚನ್ನರಾಯಪಟ್ಟಣ ➔ ಮರೂರು ಹ್ಯಾಂಡ್ ಪೋಸ್ಟ್ ➔ ಎಲೆಯೂರು (ಉದಯಪುರ) ➔ ಶಾಂತಿಗ್ರಾಮ ➔ ಭೂನಳ್ಳಿ ಕ್ರಾಸ್ ➔ ಹಾಸನ ಡೈರಿ ಸರ್ಕಲ್ ➔ ಎನ್ ಆರ್ ಸರ್ಕಲ್ ➔ ಮೋಸಲೆ ಹೊಸಹಳ್ಳಿ ಮೂಲಕ ಹೊಳೆನರಸೀಪುರ ತಲುಪಲಿದೆ.

ಹೋಳೆನರಸೀಪುರದಲ್ಲಿ ಅಂತಿಮ ದರ್ಶನ:

  • ರಾತ್ರಿ: ಹೊಳೆನರಸೀಪುರದಲ್ಲಿರುವ ಶ್ರೀ ಎಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ.
  • 20-07-2026 ಸೋಮವಾರ: ಬೆಳಗ್ಗೆ 7:00 ರಿಂದ 9:30 ಗಂಟೆಯವರೆಗೆ ಶ್ರೀ ಎಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಸಾರ್ವಜನಿಕರು ಕೊನೆಯ ಬಾರಿ ದರ್ಶನ ಪಡೆಯಬಹುದು.

ಅಂತ್ಯಕ್ರಿಯೆಯ ವಿವರ:

ಅಂತ್ಯಕ್ರಿಯೆ ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 4:15 ಗಂಟೆಯವರೆಗೆ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ನಿರ್ಗಮನ: ಸೋಮವಾರ ಬೆಳಗ್ಗೆ 10:00 ಗಂಟೆಗೆ ಹೊಳೆನರಸೀಪುರದಿಂದ ಹೊರಟು, 11:30 ಗಂಟೆಗೆ ಹಳೇಕೋಟೆ (ಮಾವಿನಕೆರೆ) ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲನ್ನು ತಲುಪಲಿದೆ.

Leave a Reply

Your email address will not be published. Required fields are marked *