
ಬದುಕು ಜಟಕಾ ಬಂಡಿ….
Msc ಯನ್ನು ಅರ್ದಕ್ಕೆ ನಿಲ್ಲಿಸಿ ಊರಿಗೆ ಬಂದುಬಿಟ್ಟೆದ್ದೆ. ಮನೆಯಲ್ಲಿ ಎಲ್ಲರದೂ ತಾತ್ಸಾರ ನೋಟ, ಏನು ಮಾತನಾಡಿದರು ತಪ್ಪು. ಸಹೋದ್ಯೋಗಿಗಳು ಮತ್ತು ಅಕ್ಕ ಪಕ್ಕದವರ ಮಕ್ಕಳ ಜೊತೆಗೆ ಹೋಲಿಕೆ “ನೋಡು ಎಂತೆಂತಹವರ ಮಕ್ಕಳು ಡಾಕ್ಟರ್ , ಇಂಜನಿಯರ್ ಆಗಿದ್ದಾರೆ, ವಿದೇಶಗಳಲ್ಲಿದ್ದಾರೆ,ನೀನು ಮಾತ್ರ ಮನೆಯಲ್ಲಿಯೇ ಕುಳಿತುಕೊಂಡಿರುವೆ, ನಿನ್ನ ಬಗ್ಗೆ ಜನರ ಹತ್ತಿರ ಹೇಳಿಕೊಳ್ಳುವುದೇ ನಮಗೆ ನಾಚಿಕೆ ಆಗಿದೆ” ಎಂಬ ಮಾತುಗಳನ್ನು ಕೇಳಿ ಕೇಳಿ ಮನೆಯಲ್ಲಿ ಉಸಿರು ಕಟ್ಟಿದಂತಾಗಿತ್ತು. ಬೇರೆ ದಾರಿಯಿಲ್ಲದೆ ಮನೆಯನ್ನು ಬಿಟ್ಟು ಬೆಂಗಳೂರಿನ ದಾರಿ ಹಿಡಿದಿದ್ದೆ.
ಮುಂದೇನು , ಯಾವ ಕೆಲಸ ಮಾಡಬಲ್ಲೆ ಎಂಬುದೇ ತಿಳಿಯದಂತಹ ದಿನ ಅದು, ಒಂದು ತಿಂಗಳು ಹೇಗೋ ಸ್ನೇಹಿತರ ಹಣ ಮತ್ತು ರೂಂನಲ್ಲಿ ಕಳೆದದ್ದಾಯಿತು,ಎಷ್ಟು ದಿನ ಕಳೆಯಲು ಸಾಧ್ಯ ,ಗೊತ್ತಿರುವವರೊಬ್ಬರನ್ನು ಕೆಲಸ ಕೊಡಿಸಲು ಅಂಗಲಾಚಿದೆ,” ಏನು ಕೆಲಸಬರುತ್ತದೆ,ನನ್ನ ಸ್ನೇಹಿತರೊಬ್ಬರ ಸೆಕ್ಯೂರಿಟಿ ಏಜೆನ್ಸಿ ಇದೆ ಮಾಡುತ್ತೀಯ” ಎಂದು ಕೇಳಿದರು. ಕೆಲಸ ಯಾವುದಾದರೇನು ಮನೆಯಿಂದ ಹಣ ಕೇಳದಿದ್ದರೆ ಸಾಕು ಎಂದು ನಿರ್ಧರಿಸಿದ್ದೆ.
ಅಂತು ಕಾಲೇಜಿನ ದಿನಗಳಲ್ಲಿ NCC ಮಾಡಿದುದು ಉಪಯೋಗಕ್ಕೆ ಬಂತು, security supervisor ಗೆ ಬಡ್ತಿ ನೀಡಿ, IIPM(Indian Institute of plantation management)ಗೆ ನನ್ನನ್ನು ನಿಯೋಜಿಸಲಾಯಿತು.
ಸೆಕ್ಯೂರಿಟಿ ಕೆಲಸದ ಜೊತೆಗೆ ,ಅಲ್ಲೇ ಇದ್ದ ಲೈಬ್ರರಿಯ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವುದು ಉತ್ತಮ ಕೆಲಸಕ್ಕಾಗಿ ಹುಡುಕಾಟ ನಡೆದಿರಬೇಕಾದರೆ ಒಂದು ಜಾಹೀರಾತು ಗಮನ ಸೆಳೆಯಿತು
coffee Board ನಲ್ಲಿ post graduate diploma in coffee quality management ,one year training , 100% job assurance. Course fee 50000 Rs ಎಂದು ಇತ್ತು.
ಅಂದಿಗೆ ನನಗೆ ಅದು ದೊಡ್ಡ ಮೊತ್ತ ,ನೋಡೋಣ ಎಂದು ನಾನು ಕೂಡ ಅರ್ಜಿ ಹಾಕಿದ್ದೆ,ಸಂದರ್ಶನಕ್ಕೆ ಕರೆಬಂತು,ನೋಡಿದರೆ ಸಂದರ್ಶಕರೊಬ್ಬರಲ್ಲಿ IIPM Director ಸುಭಾಷ್ ಶರ್ಮ!! !
ಅವರ ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿರುವುದನ್ನು ಕೇಳಿ ಖುಷಿಯಿಂದಲೇ ನನ್ನನ್ನು ಆಯ್ಕೆ ಮಾಡಿದ್ದರು . ನನ್ನಿಂದ ಅಷ್ಟೊಂದು ಹಣ ಭರಿಸಲು ಸಾಧ್ಯವಿಲ್ಲ ಎಂದು ಕಷ್ಟವನ್ನು ಹೇಳಿಕೊಂಡಾಗ, ಕ್ಷಣ ಮಾತ್ರವೂ ಯೋಚಿಸದೇ Bank Manager ರನ್ನು ಅಲ್ಲಿಯೇ ಕರೆಸಿ , ನನ್ನ ಓದಿನ ಖರ್ಚುನ್ನೂ ಸೇರಿಸಿ , ಅವರೇ ಸಹಿ ಮಾಡಿ, ಲೋನ್ ಕೊಡಿಸುವ ವ್ಯವಸ್ಥೆ ಮಾಡಿಯೇ ಬಿಟ್ಟರು!!!!!!
ಒಬ್ಬ ಮಂಡ್ಯದ ಹುಡುಗನ ಕಾಫಿಯ ಸಂಬಂಧ ಹೀಗೆ ಶುರುವಾಯಿತು , ಅದೇ ಸಂಸ್ಥೆಯಲ್ಲಿ ನನಗೆ guest lecturer ಆಗಿ ಕೆಲಸಮಾಡುವ ಅವಕಾಶ ವನ್ನೂ ಕೂಡ ಕಲ್ಪಿಸಿದ್ದರು.
ಅಲ್ಲಿಂದ ಮುಂದೆ ಏನೆಲ್ಲಾ ಆಯಿತು ಎಂದು ನಿಮಗೂ ಗೊತ್ತೇ ಇದೆ… .ಕೆಲಸದ ಮಹತ್ವ ತಿಳಿದಿರುವ ನನಗೆ ಹಳ್ಳಿಯಿಂದ ಬಂದ ಯುವಕರಿಗೆ ಆಸರೆ ಯಾಗುವ ಪ್ರಯತ್ನ ಮಾಡುತ್ತಿದ್ದೇನೆ…
ಮುಂದಿನ ತಿರುವುಗಳನ್ನು ಊಹಿಸಲಾಗುವುದಿಲ್ಲ , ಕಷ್ಟಗಳಿಗೆ ಎದೆಗುಂದದೆ ನಮ್ಮ ನಡೆ ನುಡಿ ಮತ್ತು ಯೋಚನೆ ಒಳ್ಳೆಯದೇ ಆಗಿದ್ದರೆ ಎಂದೆಂದೂ ಒಳ್ಳೆಯದೇ ಆಗುತ್ತದೆ…