ಶಿವಮೊಗ್ಗ ದಲ್ಲಿ ಮಾಜಿ ಸಚಿವ ಈಶ್ವರಪ್ಪ ಪತ್ರಿಕಾಗೋಷ್ಠಿ ; ಬಂಡಾಯ ಅಭ್ಯರ್ಥಿ ಆಗಿ ನಿಲ್ಲಲು ಬೆಂಬಲಿಗರ ಒತ್ತಾಯ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 152 ಹುದ್ದೆಗಳಿಗೆ ನೇರನೇಮಕಾತಿ
What did Deve Gowda say and what did he do?- CM Siddaramaiah explains through Deve Gowda’s words
ಎನ್ ಡಿಎ ತೆಕ್ಕೆಗೆ ಜೆಡಿಎಸ್: ಯಡಿಯೂರಪ್ಪ ಸೇರಿ ರಾಜ್ಯದ ಹಲವು ಬಿಜೆಪಿ ಮುಖಂಡರಿಂದ ಸ್ವಾಗತ
ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿದೆ ; ಸಿಎಎ ಜಾರಿ: ಬಿಜೆಪಿಯ ಚುನಾವಣಾ ಗಿಮಿಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ
ಶಿವಮೊಗ್ಗ ದಲ್ಲಿ ಮಾಜಿ ಸಚಿವ ಈಶ್ವರಪ್ಪ ಪತ್ರಿಕಾಗೋಷ್ಠಿ ; ಬಂಡಾಯ ಅಭ್ಯರ್ಥಿ ಆಗಿ ನಿಲ್ಲಲು ಬೆಂಬಲಿಗರ ಒತ್ತಾಯ
ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರು, ಆಶಾ ಕಾರ್ಯಕರ್ತೆಯರ, ವಿಕಲ ಚೇತನರ ಬೇಡಿಕೆಗಳಿಗೆ ಸ್ಪಂದಿಸಿದ  CM
ಒಕ್ಕಲಿಗರಿಗೆ ಮಾರಕವಾಗಲಿದೆಯೇ…!? ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ…..
ದುಬೈ ಒಕ್ಕಲಿಗರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆಯ ಅಂಗವಾಗಿ ಮಹಿಳಾ ಸಾಧಕಿಯರಿಗೆ ಸನ್ಮಾನ
ಒಕ್ಕಲಿಗ ಯುವ ಬ್ರಿಗೇಡ್‌ ಮತ್ತು ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ವತಿಯಿಂದ   ಆಯೋಜಿಸಿದ್ದ ಉದ್ಯೋಗ ಮೇಳ ಯಶಸ್ವಿ
ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳ ಕುಟುಂಬ

ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ,……

ಪ್ರಮುಖ ಘಟನೆಗಳು ,ತಿರುವುಗಳು,ಸೋಲು ಗೆಲುವುಗಳು,ಹಾದಿಯಲ್ಲಿ ಸಿಕ್ಕಂತ ಪ್ರಮುಖ ವ್ಯಕ್ತಿಗಳು ಮಾತ್ರ ಆಗಾಗ ನೆನಪಿಸಿಕೊಳ್ಳುತ್ತೇವೆ ಮತ್ತು ಬೇರೆಯವರು ಕೂಡ ಗುರುತಿಸುತ್ತಾರೆ.ಆದರೆ ಪ್ರತಿ ಘಟನೆಯ ನಡುವಿನ ಅಂತರ ಕೆಲವೊಮ್ಮೆ ಒಂದು ತಿಂಗಳು ,ಆರು ತಿಂಗಳು ಆಗಬಹುದು ,ವರ್ಷಗಳೂ ಆಗಬಹುದು ,ಬಹುಶಃ ಇಂತಹ ದಿನಗಳಲ್ಲಿ ಅನುಭವಿಸಿದ ಮಾನಸಿಕ ಹೋರಾಟ ,ಕೀಳರಿಮೆ,ಅವಮಾನ ,ಅಸಹಾಯಕತೆಬೇರೆಯವರಿಗೆ ತಿಳಿದಿರುವುದಿಲ್ಲ,ನಮ್ಮ ನಡತೆ ಮತ್ತು ಆತ್ಮಬಲವನ್ನು ಪರೀಕ್ಷೆಗೊಡ್ಡುವ ದಿನಗಳು.ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಬಿಟ್ಟು ಬರುತ್ತಿದ್ದೆ,ತುಂಬಾ busy ಎಂದು ತೋರಿಸಿಕೊಳ್ಳುವ ನಾಟಕ .ಹೊರಗೆ ಬಂದಾಗ ಎಲ್ಲಿ ಹೋಗಬೇಕು ಎಂದು ತಿಳಿಯುತ್ತಿರಲಿಲ್ಲ,ಯಾರಾದರು ತಿಳಿದವರು ಅಡ್ಡ ಸಿಕ್ಕಿದರೆ, “ಏನಿಲ್ಲಿ”!! ಎಂದು ಕೇಳುತ್ತಿದ್ದರು.ಇಲ್ಲೆ company ಕೆಲಸ ಇತ್ತು ಬಂದಿದ್ದೆ”ಎನ್ನುವ ಸುಳ್ಳು ,ಕಾಫಿ “ಕುಡಿಯೋಣ ಬನ್ನಿ” ಎಂದರೆ, “ಇಲ್ಲ urgent ಇದೆ boss ಬಯ್ಯುತ್ತಾರೆ ಇನ್ನೊಮ್ಮೆ ಸಿಗೋಣ” ಎಂದು ಹೇಳಿ escape ,ಏಕೆಂದರೆ ಕೈಯಲ್ಲಿ ಹಣ ಇರುತ್ತಿರಲಿಲ್ಲ .ಆಗ ಕೈ ಹಿಡಿದಿದ್ದು ಓದುವ ಹವ್ಯಾಸ ,ಕಬ್ಬನ್ ಪಾರ್ಕನಲ್ಲಿದ್ದ red building library ನೇ ಅಂದಿನ office .ಸಂಜೆವರೆಗು ಪುಸ್ತಕಗಳನ್ನು ಓದುವುದು ,ಗೊತ್ತಿರುವವರು ಬಂದರೆ ಮುಖಕ್ಕೆ ಅಡ್ಡವಾಗಿ ಪುಸ್ತಕ ಹಿಡಿದುಕೊಳ್ಳುವುದು. ಮಧ್ಯಾಹ್ನ ಹಸಿವಾದಗ ಫುಟ್ ಪಾತ್ ನಲ್ಲಿಒಂದು ಪ್ಲೇಟ್ ರೈಸ್ ಸಾಂಬಾರ್,ದುಡ್ಡೇ ಇಲ್ಲದಾಗ ನೀರೆ ಗತಿ.ಒಮ್ಮೆ ನೆನೆಪಿದೆ coffee powderನ್ನು RMCYard ನಲ್ಲಿ delivery ಮಾಡಿ ಬರುವಾಗ ,ಯಶವಂತಪುರ್ ಬಸ್ಸು ಸ್ಟಾಂಡಿನಹತ್ತಿರ ಸ್ಕೂಟರ್ petrol ಖಾಲಿಯಾಯಿತು,ಕೈ ಯಲ್ಲಿ ಹಣ ಇರಲಿಲ್ಲ,ಅಲ್ಲಿಯೇ ಒಂದು ಕಡೆ ಪಕ್ಕದಲ್ಲಿ ಗಾಡಿನಿಲ್ಲಿಸಿ ಸದಾಶಿವನಗರದವರೆಗೆ ನಡೇದೇ ಹೋಗಿ ಸ್ನೇಹಿತರ ಹತ್ತಿರ 200 ರೂ ಸಾಲ ಪಡೆದು ಗಾಡಿ ತೆಗೆದುಕೊಂಡು ಬಂದಿದ್ದೆ,Highcourt canteen ಮತ್ತಿತರ ಜಾಗದಲ್ಲಿ ಎಷ್ಟೇ ಒತ್ತಾಯ ಮಾಡಿದರು ಕಾಫಿ powder ತೆಗೆದು ಕೊಳ್ಳದಿದ್ದಾಗ ಅಳುವೇ ಬಂದಂತಾಗಿ,ಸ್ವಲ್ಪ ಮೌನವಾಗಿ ಕುಳಿತು ,”ಮೇರ ನಂಬರ್ ಆಯಗ” ಎಂದುಕೊಂಡು ಎದ್ದು ಬಂದಿದ್ದೆ……. ಆದರೆ Thank God,ನನ್ನ wife ಚೈತ್ರ , ಅಪ್ಪನ ಮನೆಯವರು ಸ್ಥಿತಿವಂತರಾಗಿದ್ದರೂ ಕೂಡ ,ನನ್ನ ಅಂದಿನ ಸ್ಥಿತಿ ಯನ್ನು ತಾತ್ಸಾರವಾಗಿ ನೋಡಲಿಲ್ಲ,ಬೇರೆಯವರ ಜೊತೆ ಹೋಲಿಸಲಿಲ್ಲ,ಹೀಯಾಳಿಸಲಿಲ್ಲ,ಬಹುಶಃ ಇದೊಂದೇ ಯಾವುದೇ ಹೆಂಡತಿ ಗಂಡನಿಗೆ ಮಾಡಬೇಕಾದ ದೊಡ್ಡ ಸಹಾಯ,ಯಾರಿಗಾದರೂ ಏನಾದರು ಸಾಧಿಸಬೇಕೆಂಬ ಉತ್ಸಾಹ ಮತ್ತು ಹುಮ್ಮಸ್ಸು ತಾನಾಗಿಯೇ ಬರುತ್ತದೆ ……ಎಲ್ಲರು ನೋಡುವಾಗ ಬುದ್ಧಿವಂತರಂತೆ ಹಾಗು ಒಳ್ಳೆಯವರಂತೆ ನಡೆದು ಕೊಳ್ಳುತ್ತೇವೆ,ಯಾರು ನಮ್ಮನ್ನು ನೊಡದಿದ್ದಾಗ ಏನು ಮಾಡುತ್ತೇವೆ ಎಂಬುದೆನಮ್ಮ ಸೋಲು ಗೆಲುವಿನ ನಿರ್ಧಾರ …….