PM Vishwakarma Yojana 2026; ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ 2026: ಉಚಿತ ತರಬೇತಿ ಜೊತೆಗೆ ಸಿಗಲಿದೆ ₹15,000 ಸ್ಟೈಫಂಡ್! ಅರ್ಜಿ ಸಲ್ಲಿಕೆ ಹೇಗೆ?
PM Vishwakarma Yojana 2026 ; ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಮನೆಯಲ್ಲೇ ಸ್ವಂತ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೇಂದ್ರ ಸರ್ಕಾರವು ‘ಪಿಎಂ ವಿಶ್ವಕರ್ಮ ಯೋಜನೆ’ (PM Vishwakarma Yojana 2026) ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಹಾಗೂ ತರಬೇತಿ ನೀಡುವ ಭರ್ಜರಿ ಸೌಲಭ್ಯವನ್ನು ಜಾರಿಗೆ ತಂದಿದೆ. ಯುವತಿಯರು ಮತ್ತು ಗೃಹಿಣಿಯರು ಸ್ವಂತ ಟೈಲರಿಂಗ್ ಬಿಸಿನೆಸ್ ಆರಂಭಿಸಲು ಇದು ಅತ್ಯುತ್ತಮ ಅವಕಾಶವಾಗಿದೆ.
ಯೋಜನೆಯಡಿ ಸಿಗುವ ಸೌಲಭ್ಯಗಳು:
- ಉಚಿತ ಹೊಲಿಗೆ ಯಂತ್ರ ಉಪಕರಣಗಳು: ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಲು ₹15,000 ರೂಪಾಯಿಗಳ ಇ-ವೋಚರ್ (e-Voucher) ಅಥವಾ ಟೂಲ್‌ಕಿಟ್ ಪ್ರೋತ್ಸಾಹ ಧನವನ್ನು ಉಚಿತವಾಗಿ ನೀಡಲಾಗುತ್ತದೆ.
- ದಿನಕ್ಕೆ ₹500 ಸ್ಟೈಫಂಡ್ (Stipend): ತರಬೇತಿ ಅವಧಿಯಲ್ಲಿ ಮಹಿಳೆಯರಿಗೆ ಆರ್ಥಿಕ ಹೊರೆಯಾಗದಂತೆ, ಪ್ರತಿದಿನಕ್ಕೆ ₹500 ರಂತೆ ಕೌಶಲ್ಯ ಅಭಿವೃದ್ಧಿ ಭತ್ಯೆಯನ್ನು (Stipend) ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
- ಕಡಿಮೆ ಬಡ್ಡಿಯಲ್ಲಿ ಬಿಸಿನೆಸ್ ಲೋನ್: ತರಬೇತಿ ಮುಗಿದ ನಂತರ ಬಿಸಿನೆಸ್ ಅನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಇಚ್ಛಿಸುವ ಮಹಿಳೆಯರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಕೇವಲ ಶೇ. 5ರಷ್ಟು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ₹3 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ (ಲಿಂಕ್ ಆಗಿರಬೇಕು)
- ಪಡಿತರ ಚೀಟಿ (Ration Card)
- ಬ್ಯಾಂಕ್ ಪಾಸ್‌ಬುಕ್ ವಿವರಗಳು
- ಶ್ರಮಿಕ ವರ್ಗ ಅಥವಾ ಟೈಲರಿಂಗ್ ವೃತ್ತಿಗೆ ಸಂಬಂಧಿಸಿದ ಸ್ವಯಂ ಘೋಷಣಾ ಪತ್ರ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮಹಿಳೆಯರು ನಿಮ್ಮ ಹತ್ತಿರದ ಡಿಜಿಟಲ್ ಸೇವಾ ಕೇಂದ್ರ (CSC – Common Service Centre) ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಪಿಎಂ ವಿಶ್ವಕರ್ಮ ಯೋಜನೆಯಡಿ ‘ದರ್ಜಿ’ (Tailor) ಕೆಟಗರಿಯನ್ನು ಆಯ್ಕೆ ಮಾಡಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
