sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತುಸ್ತ್ರೀ ...

ಗ್ಯಾಸ್ ಇ ಕೆವೈಸಿ ಮಾಡುವ ವಿಧಾನ; ನಿಮ್ಮ ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಮಾಡಿ! ಸಬ್ಸಿಡಿ ಹಣ ನಿಲ್ಲಲ್ಲ: ಇಲ್ಲಿದೆ ಸರಳ ವಿಧಾನ!

ನೀವು ಇಂಡೇನ್ (Indane), ಹೆಚ್‌ಪಿ (HP) ಅಥವಾ ಭಾರತ್ (Bharat) ಗ್ಯಾಸ್ ಕನೆಕ್ಷನ್ ಹೊಂದಿದ್ದೀರಾ? ಹಾಗಾದರೆ ನಿಮಗೆ ಕೇಂದ್ರ ಸರ್ಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪಡೆಯುವ ಪ್ರತಿಯೊಬ್ಬ ಗ್ರಾಹಕರು ತಮ್ಮ ಗ್ಯಾಸ್ ಕನೆಕ್ಷನ್‌ಗೆ ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಹಣ ಸ್ಥಗಿತಗೊಳ್ಳಲಿದೆ. ಗ್ಯಾಸ್ ಇ ಕೆವೈಸಿ ಮಾಡುವ ವಿಧಾನ

ಗ್ಯಾಸ್ ಇ-ಕೆವೈಸಿ ಮಾಡಲು ಏಜೆನ್ಸಿ ಕಚೇರಿಗೆ ಹೋಗಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಕೇವಲ 5 ನಿಮಿಷದಲ್ಲಿ ಇದನ್ನು ಹೇಗೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಮೊಬೈಲ್‌ನಲ್ಲಿ ಗ್ಯಾಸ್ ಇ-ಕೆವೈಸಿ ಮಾಡುವ ಸುಲಭ ಹಂತಗಳು:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಓಪನ್ ಮಾಡಿ myaccess.my lpg.in ಅಥವಾ mylpg.in ವೆಬ್‌ಸೈಟ್‌ಗೆ ಹೋಗಿ.
  2. ನಿಮ್ಮ ಗ್ಯಾಸ್ ಕಂಪನಿ ಸೆಲೆಕ್ಟ್ ಮಾಡಿ: ವೆಬ್‌ಸೈಟ್ ಹೋಮ್ ಪೇಜ್‌ನಲ್ಲಿ ನಿಮಗೆ ಮೂರು ಗ್ಯಾಸ್ ಸಿಲಿಂಡರ್‌ಗಳ ಚಿತ್ರಗಳು ಕಾಣಿಸುತ್ತವೆ (Indane, HP, Bharat). ನಿಮ್ಮದು ಯಾವ ಕಂಪನಿಯೋ ಅದರ ಮೇಲೆ ಕ್ಲಿಕ್ ಮಾಡಿ.
  3. ಲಾಗಿನ್ ಆಗಿ: ನಿಮ್ಮ ಮೊಬೈಲ್ ನಂಬರ್ ಬಳಸಿ ಅಲ್ಲಿ ಮೊದಲು ರಿಜಿಸ್ಟರ್ ಅಥವಾ ಲಾಗಿನ್ ಆಗಿ.
  4. ಇ-ಕೆವೈಸಿ ಆಪ್ಷನ್ ಕ್ಲಿಕ್ ಮಾಡಿ: ಲಾಗಿನ್ ಆದ ಮೇಲೆ ಪೇಜ್‌ನಲ್ಲಿ Submit e-KYC ಅಥವಾ Aadhaar Authentication ಎಂಬ ಆಪ್ಷನ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
  5. ಆಧಾರ್ ಮತ್ತು ಒಟಿಪಿ ನೀಡಿ: ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಟೈಪ್ ಮಾಡಿ ಸಬ್ಮಿಟ್ ಕೊಡಿ. ಆಗ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಒಂದು OTP (ಒಟಿಪಿ) ಬರುತ್ತದೆ. ಆ ಒಟಿಪಿಯನ್ನು ಬಾಕ್ಸ್‌ನಲ್ಲಿ ಎಂಟರ್ ಮಾಡಿ Verify ಕೊಡಿ.
  6. ಪ್ರಕ್ರಿಯೆ ಪೂರ್ಣಗೊಳ್ಳಲಿದೆ: ಒಟಿಪಿ ವೆರಿಫೈ ಆದ ತಕ್ಷಣ ನಿನ್ನ ಸ್ಕ್ರೀನ್ ಮೇಲೆ “e-KYC Completed Successfully” ಅಂತ ಮೆಸೇಜ್ ಬರುತ್ತದೆ.

ಗ್ಯಾಸ್ ಏಜೆನ್ಸಿ ಮೂಲಕ ಮಾಡುವ ದಾರಿ:

ಒಂದು ವೇಳೆ ಆನ್‌ಲೈನ್‌ನಲ್ಲಿ ಮಾಡಲು ಬಾರದಿದ್ದರೆ, ನಿಮ್ಮ ಆಧಾರ್ ಕಾರ್ಡ್, ಗ್ಯಾಸ್ ಪಾಸ್‌ಬುಕ್ ಮತ್ತು ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ತಗೆದುಕೊಂಡು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಅಲ್ಲಿ ಹೆಬ್ಬೆಟ್ಟಿನ ಗುರುತು (Biometric) ನೀಡುವ ಮೂಲಕವೂ ಇ-ಕೆವೈಸಿ ಮಾಡಿಸಬಹುದು.

Leave a Reply

Your email address will not be published. Required fields are marked *