sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತು

ಆಸ್ತಿ ನೋಂದಣಿ ಆದಾಯ ತೆರಿಗೆ ನೋಟೀಸ್ ; ಆಸ್ತಿ ನೋಂದಣಿ ವೇಳೆ ಕಡಿಮೆ ಮೊತ್ತ ತೋರಿಸಿದರೆ ಇನ್ಕಮ್ ಟ್ಯಾಕ್ಸ್ ನೋಟಿಸ್ ಬಿಗ್ ಅಲರ್ಟ್!

ಆಸ್ತಿ ನೋಂದಣಿ ಆದಾಯ ತೆರಿಗೆ ನೋಟಿಸ್; ನೀವೇನಾದರೂ ಹೊಸದಾಗಿ ಸೈಟು, ಮನೆ ಅಥವಾ ಫ್ಲ್ಯಾಟ್ ಖರೀದಿಸುತ್ತಿದ್ದು, ನೋಂದಣಿ ಶುಲ್ಕ (Registration Charge) ಹಾಗೂ ಮುದ್ರಾಂಕ ಶುಲ್ಕ (Stamp Duty) ಉಳಿಸುವ ನೆಪದಲ್ಲಿ ಕ್ರಯಪತ್ರದಲ್ಲಿ (Sale Deed) ಆಸ್ತಿಯ ನಿಜವಾದ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆ ನಮೂದಿಸುತ್ತಿದ್ದೀರಾ? ಹಾಗಿದ್ದರೆ ಹುಷಾರ್! ಸಣ್ಣ ಉಳಿತಾಯಕ್ಕೆ ಹೋಗಿ ಆದಾಯ ತೆರಿಗೆ ಇಲಾಖೆಯ (Income Tax Department) ಜಾಲಕ್ಕೆ ಸಿಲುಕಿ ಭಾರೀ ದಂಡ ತೆರಬೇಕಾಗಬಹುದು.

​ಆಸ್ತಿ ನೋಂದಣಿ ವೇಳೆ ತೆರಿಗೆ ಉಳಿಸಲು ಮಾಡುವ ಈ ಅಡ್ಡದಾರಿಗಳಿಂದ ಆಗುವ ಭೀಕರ ಅನಾಹುತಗಳ ಬಗ್ಗೆ ಕಾನೂನು ತಜ್ಞರು ಬಿಗ್ ಅಲರ್ಟ್ ನೀಡಿದ್ದಾರೆ.

ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಿ:

  • ​ಒಂದು ಆಸ್ತಿಯ ನಿಜವಾದ ಮಾರುಕಟ್ಟೆ ಬೆಲೆ (Market Value) ₹1.20 ಕೋಟಿ ಎಂದಿಟ್ಟುಕೊಳ್ಳೋಣ.
  • ​ಆದರೆ, ನೋಂದಣಿ ವೇಳೆ ಸ್ಟಾಂಪ್ ಡ್ಯೂಟಿ ಹಾಗೂ ರಿಜಿಸ್ಟ್ರೇಷನ್ ಚಾರ್ಜ್ ಉಳಿಸಲು ಕ್ರಯಪತ್ರದಲ್ಲಿ (Sale Deed) ಕೇವಲ ₹80 ಲಕ್ಷ ಎಂದು ಕಡಿಮೆ ತೋರಿಸಿದರೆ, ನೀವು ಉಳಿಸುವುದು ಕೇವಲ ₹4 ಲಕ್ಷ ರೂಪಾಯಿ ಇರಬಹುದು.
  • ​ಆದರೆ, ಈ ಅಂತರದ ಮೌಲ್ಯ (₹40 ಲಕ್ಷ) ನೇರವಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 50C (Section 50C) ಮತ್ತು ಸೆಕ್ಷನ್ 56(2)(x) [Section 56(2)(x)] ಅಡಿಯಲ್ಲಿ ತೆರಿಗೆ ವ್ಯಾಪ್ತಿಗೆ ಬರುತ್ತದೆ.

​ಇದರಿಂದಾಗಿ ಇನ್‌ಕಮ್ ಟ್ಯಾಕ್ಸ್ ಇಲಾಖೆಯಿಂದ ನೇರವಾಗಿ ನೋಟಿಸ್ ಜಾರಿಯಾಗಲಿದ್ದು, ₹4 ಲಕ್ಷ ಉಳಿಸಲು ಹೋಗಿ ₹12 ಲಕ್ಷಕ್ಕೂ ಅಧಿಕ ತೆರಿಗೆ ಹಾಗೂ ದಂಡ (Tax & Penalty) ತೆರಬೇಕಾಗುತ್ತದೆ!

ಗಮನಿಸಬೇಕಾದ ಪ್ರಮುಖ ತೆರಿಗೆ ನಿಯಮಗಳು:

  1. ಗೈಡೆನ್ಸ್ ವ್ಯಾಲ್ಯೂ (Guidance Value): ಸರ್ಕಾರ ನಿಗದಿಪಡಿಸಿದ ಮಾರ್ಗದರ್ಶಿ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಆಸ್ತಿ ನೋಂದಣಿ ಮಾಡಲು ಅವಕಾಶವಿಲ್ಲ.
  2. ರಿಜಿಸ್ಟ್ರೇಷನ್ ಚಾರ್ಜ್ (Registration Charge): ದಿನಾಂಕ 31-08-2025 ರಿಂದ ಶೇಕಡಾ 2% ರಿಜಿಸ್ಟ್ರೇಷನ್ ಶುಲ್ಕ ಅನ್ವಯವಾಗುತ್ತದೆ.
  3. 1% TDS ಕಡ್ಡಾಯ: ಆಸ್ತಿಯ ಮೌಲ್ಯ ₹50 ಲಕ್ಷಕ್ಕಿಂತ ಹೆಚ್ಚಿದ್ದರೆ ಖರೀದಿದಾರರು ಶೇ. 1% TDS ಕಡಿತಗೊಳಿಸಿ ಆದಾಯ ತೆರಿಗೆ ಇಲಾಖೆಗೆ ಪಾವತಿಸುವುದು ಕಡ್ಡಾಯವಾಗಿದೆ.

ಕಾನೂನು ತಜ್ಞರು ಏನು ಹೇಳುತ್ತಾರೆ?

​ಆಸ್ತಿ ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ಎಂದಿಗೂ ಕಾನೂನುಬಾಹಿರವಾಗಿ ಕಡಿಮೆ ಮೊತ್ತ ತೋರಿಸಬೇಡಿ. ‘ಅಂಡರ್ ವ್ಯಾಲ್ಯೂಯೇಷನ್’ (Undervalution) ಮಾಡುವುದು ಕಾನೂನುಬಾಹಿರವಾಗಿದ್ದು, ಮುಂದಿನ ದಿನಗಳಲ್ಲಿ ಆಸ್ತಿಯನ್ನು ಮರುಮಾರಾಟ ಮಾಡುವಾಗ ‘ಕ್ಯಾಪಿಟಲ್ ಗೇನ್ ಟ್ಯಾಕ್ಸ್’ (Capital Gains Tax) ಕಟ್ಟುವಾಗಲೂ ಇದು ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ.

​ಖರೀದಿದಾರರು ಹಾಗೂ ಮಾರಾಟಗಾರರು ಇಬ್ಬರೂ ತಮ್ಮ ಆಸ್ತಿಯ ಸಂಪೂರ್ಣ ವಿವರವನ್ನು ಸರಿಯಾಗಿ ನಮೂದಿಸಿ ನೋಂದಣಿ ಮಾಡಿಸಿಕೊಳ್ಳುವುದು ಸುರಕ್ಷಿತ.

Leave a Reply

Your email address will not be published. Required fields are marked *