sakhigeetha.com

Top 1 Women's Magazines & Publications

ಸುದ್ದಿ ಜಗತ್ತು

ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ 75ನೇ ಅಮೃತ ಮಹೋತ್ಸವ: ಚಂದನವನದ ತಾರಾ ಮೆರುಗು

ಕನ್ನಡ ಚಿತ್ರರಂಗದ ಧ್ರುವತಾರೆ, ಸಾಹಸಸಿಂಹ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವವು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಅತ್ಯಂತ ಅದ್ದೂರಿಯಾಗಿ ಮತ್ತು ಐತಿಹಾಸಿಕವಾಗಿ ನೆರವೇರಿತು. ಚಂದನವನದ ಸಮಸ್ತ ನಟರು, ನಟಿಯರು ಹಾಗೂ ದಿಗ್ಗಜ ಕಲಾವಿದರು ಈ ಬೃಹತ್ ವೇದಿಕೆಯಲ್ಲಿ ಉಪಸ್ಥಿತರಿದ್ದು ದಾದಾಗೆ ವಿಶೇಷ ನಮನ ಸಲ್ಲಿಸಿದರು.

​ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಒಬ್ಪನ ನಟನಿಗಾಗಿ ಅರ್ಧ ಕಿಲೋಮೀಟರ್ ಉದ್ದದ ಕರ್ನಾಟಕ ಬಾವುಟವನ್ನು ಹಿಡಿದು ಭವ್ಯ ಧ್ವಜ ಮೆರವಣಿಗೆಯನ್ನು ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಾಲಯ ದಿಂದ ನಂದಿ ಲಿಂಕ್ ಗ್ರೌಂಡ್ಸ್ ವರೆಗೂ ಹಮ್ಮಿಕೊಳ್ಳಲಾಗಿತ್ತು.

ಸಖೀಗೀತ ಕುಟುಂಬಕ್ಕೆ ಹೆಮ್ಮೆಯ ಕ್ಷಣ!

​ಇಡೀ ನಾಡಿನ ಗಮನ ಸೆಳೆದ ಈ ಮಹತ್ವದ ಕಾರ್ಯಕ್ರಮದಲ್ಲಿ ‘ಸಖೀಗೀತ’ ಮಾಸಪತ್ರಿಕೆ ಹಾಗೂ ವೆಬ್‌ಸೈಟ್ ತಂಡದ ಪ್ರಮುಖ ಸದಸ್ಯರಾದ ಶ್ರೀಮತಿ ಸಂಧ್ಯಾ ಭಟ್ ಅವರು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಆಕರ್ಷಕವಾಗಿ ನಿರೂಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ರಾಜ್ಯಮಟ್ಟದ ಇಂತಹ ಬೃಹತ್ ವೇದಿಕೆಯಲ್ಲಿ ಸಖೀಗೀತ ತಂಡದ ಪ್ರತಿಭೆಯೊಂದು ಮುಂಚೂಣಿಯಲ್ಲಿ ನಿಂತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ನಮ್ಮ ಸಂಪೂರ್ಣ ತಂಡಕ್ಕೆ ಅತ್ಯಂತ ಹೆಮ್ಮೆಯ ಮತ್ತು ಗರ್ವದ ವಿಷಯವಾಗಿದೆ. ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲ್ಗೊಂಡಿದ್ದ ಅವರಿಗೆ ಗಣ್ಯರಿಂದ ವಿಶೇಷ ಗೌರವವೂ ಸಲ್ಲಿತು.

​ಸಂಭ್ರಮದ ಮುಖ್ಯಾಂಶಗಳು:

  • ​ಕಲಾವಿದರ ಸಾಗರ: ಚಂದನವನದ ಖ್ಯಾತ ನಟ-ನಟಿಯರು ಹಾಗೂ ಹಿರಿಯ ತಾರೆಯರು ಒಂದೇ ವೇದಿಕೆಯಲ್ಲಿ ಸೇರಿ ವಿಷ್ಣುದಾದರ ನೆನಪುಗಳನ್ನು ಮೆಲುಕುಹಾಕಿದರು.
  • ​ಅಭಿಮಾನಿಗಳ ಹಾದಿ: ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ದಾದಾ ಮೇಲಿನ ತಮ್ಮ ಅಚಲ ಪ್ರೀತಿಯನ್ನು ಪ್ರದರ್ಶಿಸಿದರು.
  • ​ವ್ಯವಸ್ಥಿತ ಆಯೋಜನೆ: ವಿಷ್ಣು ಸೇನಾ ಸಮಿತಿ ಹಾಗೂ ಆಯೋಜಕರ ವತಿಯಿಂದ ದಿನವಿಡೀ ನಡೆದ ಈ ಮಹೋತ್ಸವವು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಾಯಿತು.

Leave a Reply

Your email address will not be published. Required fields are marked *