sakhigeetha.com

Top 1 Women's Magazines & Publications

Latest:
ಸುದ್ದಿ ಜಗತ್ತು

ಗೃಹಲಕ್ಷ್ಮಿ ಯೋಜನೆ: ಅರ್ಹತೆ ಪರಿಶೀಲನೆಗೆ ಮನೆ-ಮನೆ ಸಮೀಕ್ಷೆ ಮತ್ತು ಬಯೋಮೆಟ್ರಿಕ್ ದೃಢೀಕರಣ ಆರಂಭ!

GruhalakshmiScheme 2026

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಹಣ ತಲುಪಿಸುವುದನ್ನು ಖಚಿತಪಡಿಸಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಮತ್ತು ಅನರ್ಹರು ಸೇರುವುದನ್ನು ತಪ್ಪಿಸಲು ಈಗ ಮನೆ-ಮನೆ ಸಮೀಕ್ಷೆ ಮತ್ತು ಬಯೋಮೆಟ್ರಿಕ್/ಮುಖಚಹರೆ ದೃಢೀಕರಣ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ.

ಸಮೀಕ್ಷೆಯ ಪ್ರಮುಖ ಮುಖ್ಯಾಂಶಗಳು:

  • ಅರ್ಹತೆ ಪರಿಶೀಲನೆ: ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟ ಮಹಿಳೆಯರ ಖಾತೆಗಳಿಗೆ ಹಾಗೂ ಅರ್ಹತೆ ಇಲ್ಲದವರ ಖಾತೆಗಳಿಗೂ ಹಣ ಜಮೆಯಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಈ ಮರುಪರಿಶೀಲನೆ ನಡೆಸಲಾಗುತ್ತಿದೆ.
  • ಬಯೋಮೆಟ್ರಿಕ್ ಮತ್ತು ಫೇಸ್ ಅಥೆಂಟಿಕೇಶನ್: ಮುಂದಿನ ದಿನಗಳಲ್ಲಿ ಒನ್ ಟೈಮ್ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ಬರಲಿದ್ದು, ಮನೆಗೆ ಬರುವ ಅಧಿಕಾರಿಗಳು ನಿಮ್ಮ ಬಯೋಮೆಟ್ರಿಕ್ ಅಥವಾ ಫೇಸ್ ಅಥೆಂಟಿಕೇಶನ್ ಪರಿಶೀಲನೆ ನಡೆಸಲಿದ್ದಾರೆ.
  • ಮೊಬೈಲ್ ಆಪ್ ಮತ್ತು ವೆಬ್ ಪೋರ್ಟಲ್: ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಆಪ್ ಹಾಗೂ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಹೊಸದಾಗಿ ಅರ್ಜಿ ಸಲ್ಲಿಸಲು ಸಿದ್ಧತೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೂ ಸಿದ್ಧತೆ ನಡೆಸುತ್ತಿದೆ. ಹೊಸ ಅರ್ಜಿ ನಮೂನೆಯನ್ನು ಸಿದ್ಧಪಡಿಸಲಾಗಿದ್ದು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ತೆರಿಗೆ ಪಾವತಿದಾರರ ವಿವರ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಲಾಗುತ್ತದೆ.

ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ?

ನೀವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಪರಿಶೀಲನೆ ಅಥವಾ ಹೊಸ ಅರ್ಜೆಗಾಗಿ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

  • ಮನೆ ಯಜಮಾನಿ ಯಾರು ಎನ್ನುವುದರ ಆಧಾರ್ ಸಂಖ್ಯೆ.
  • ಮನೆ ಯಜಮಾನಿಯ ಬ್ಯಾಂಕ್ ಖಾತೆ ವಿವರ.
  • ಮನೆಯಲ್ಲಿ ಎಷ್ಟು ಸದಸ್ಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತದೆ ಎಂಬ ಮಾಹಿತಿ.
  • ಜಾತಿ ವಿವರ.
  • ಮನೆ ಯಜಮಾನಿ ಪತಿಯ ಹೆಸರು ಮತ್ತು ಆಧಾರ್ ಸಂಖ್ಯೆ.
  • ಆಧಾರ್ ಕಾರ್ಡ್ ದಾಖಲಾತಿ ಸಲ್ಲಿಕೆ ಕಡ್ಡಾಯ.
  • ನೀವು ಐಟಿ (IT) ಅಥವಾ ಜಿಎಸ್‌ಟಿ (GST) ಪಾವತಿದಾರರೇ ಎಂಬ ವಿವರ.
  • ಬಿಪಿಎಲ್ ಕಾರ್ಡ್ (BPL Card) ಅಥವಾ ಎಪಿಎಲ್ ಕಾರ್ಡ್ (APL Card) ವಿವರಗಳು.

Leave a Reply

Your email address will not be published. Required fields are marked *