ಗೃಹಲಕ್ಷ್ಮಿ ಯೋಜನೆ ಬಯೋಮೆಟ್ರಿಕ್ ಕಡ್ಡಾಯ; ಗೃಹಲಕ್ಷ್ಮಿಯರಿಗೆ ಸರ್ಕಾರ ಶಾಕ್: ₹2,000 ಹಣಕ್ಕೆ ಬಯೋಮೆಟ್ರಿಕ್ & ಮುಖಚಹರೆ ದೃಢೀಕರಣ ಕಡ್ಡಾಯ!
ಗೃಹಲಕ್ಷ್ಮಿ ಯೋಜನೆ ಬಯೋಮೆಟ್ರಿಕ್ ಕಡ್ಡಾಯ; ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಅಡಿ ಪ್ರತಿತಿಂಗಳು 2,000 ರೂಪಾಯಿ ಪಡೆಯುತ್ತಿರುವ ಮಹಿಳೆಯರಿಗೆ ಸರ್ಕಾರ ಬಿಗ್ ಅಪ್‌ಡೇಟ್ ನೀಡಿದೆ. ಇನ್ಮುಂದೆ ಬ್ಯಾಂಕ್ ಖಾತೆಗೆ ಹಣ ಜಮೆಯಾಗಬೇಕಾದರೆ ಫಲಾನುಭವಿಗಳ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ಅಥವಾ ಮುಖಚಹರೆ (Face Authentication) ದೃಢೀಕರಣವನ್ನು ಕಡ್ಡಾಯಗೊಳಿಸಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು, ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಎಲ್ಲಾ ಫಲಾನುಭವಿಗಳ ಮರು ಪರಿಶೀಲನೆ (Verification) ನಡೆಸಲು ನಿರ್ಧರಿಸಿದೆ.
ಯಾಕೆ ಈ ತೀರ್ಮಾನ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಡೆಸಿದ ಸಮೀಕ್ಷೆ ಹಾಗೂ ಭೌತಿಕ ಪರಿಶೀಲನೆಯಲ್ಲಿ ಆಘಾತಕಾರಿ ವಿಚಾರಗಳು ತಿಳಿದುಬಂದಿವೆ. ಮೃತಪಟ್ಟವರ ಹೆಸರಿನಲ್ಲಿ ಹಾಗೂ ಆಾಯಕರ/ಜಿಎಸ್‌ಟಿ ಪಾವತಿದಾರರ ಖಾತೆಗಳಿಗೂ ಯೋಜನೆ ಹಣ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿಯ ಬೋಗಸ್ ಹಾಗೂ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಹೊರಹಾಕಿ, ಕೇವಲ ಅರ್ಹರಿಗೆ ಮಾತ್ರ ಹಣ ತಲುಪುವಂತೆ ಮಾಡಲು ಈ ಮರು ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ.
ಫಲಾನುಭವಿಗಳು ಎಲ್ಲಿಗೆ ಹೋಗಬೇಕು?
ಗೃಹಲಕ್ಷ್ಮಿ ಯೋಜನೆಯ ಅರ್ಹ ಮಹಿಳೆಯರು ತಮ್ಮ ಸಮೀಪದ ಕೆಳಗಿನ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಮುಖಚಹರೆ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ:
- ಗ್ರಾಮ ಒನ್ (Grama One) ಕೇಂದ್ರಗಳು
- ಬೆಂಗಳೂರು ಒನ್ (Bangalore One) / ಕರ್ನಾಟಕ ಒನ್
- ಬಾಪೂಜಿ ಸೇವಾ ಕೇಂದ್ರಗಳು
- ಸ್ಥಳೀಯ ಸೇವಾ ಸಿಂಧು ಕೇಂದ್ರಗಳು
ದೃಢೀಕರಣ ಮಾಡಿಸದಿದ್ದರೆ ಏನಾಗುತ್ತದೆ?
ಸರ್ಕಾರ ನಿಗದಿಪಡಿಸುವ ಕಾಲಮಿತಿಯೊಳಗೆ ಬಯೋಮೆಟ್ರಿಕ್ ಅಥವಾ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಅಂತಹವರ ಖಾತೆಗೆ ಮಾಸಿಕ ಜಮೆಯಾಗುತ್ತಿರುವ 2,000 ರೂಪಾಯಿ ಹಣ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಆದ್ದರಿಂದ ಅರ್ಹ ಮಹಿಳೆಯರು ಯಾವುದೇ ವಿಳಂಬ ಮಾಡದೆ ಅಗತ್ಯ ದಾಖಲೆಗಳೊಂದಿಗೆ (ಆಧಾರ್ ಕಾರ್ಡ್, ರೇಷನ್ ಕಾರ್ಡ್) ಸಮೀಪದ ಕೇಂದ್ರಕ್ಕೆ ತೆರಳಿ ಪರಿಶೀಲನೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
