sakhigeetha.com

Top 1 Women's Magazines & Publications

ಸಿನೆಮಾ ಸುದ್ದಿEntertainment

ರಿಷಬ್ ಶೆಟ್ಟಿ ಫಿಲ್ಮ್ಸ್‌ನಿಂದ ಹೊಸ ಚಿತ್ರಕ್ಕೆ ನಟ-ನಟಿಯರ ಆಡಿಷನ್: ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ಕಾಸ್ಟಿಂಗ್ ಕಾಲ್!

ರಿಷಬ್ ಶೆಟ್ಟಿ ಫಿಲ್ಮ್ಸ್ ಆಡಿಷನ್ ಜಯನಗರ ಬೆಂಗಳೂರು (Rishab Shetty Films Audition Jayanagar Bangalore Kannada)

ಕಾಂತಾರ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಸಿನಿಮಾದ ಕೀರ್ತಿ ಪತಾಕೆ ಹಾರಿಸಿರುವ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರ ಬ್ಯಾನರ್ ಆದ ‘ರಿಷಬ್ ಶೆಟ್ಟಿ ಫಿಲ್ಮ್ಸ್’ (Rishab Shetty Films) ವತಿಯಿಂದ ಹೊಸ ಚಲನಚಿತ್ರಕ್ಕಾಗಿ ಪ್ರಮುಖ ಪಾತ್ರಗಳಿಗೆ ಹೊಸ ಪ್ರತಿಭೆಗಳ ಹುಡುಕಾಟ ಆರಂಭಿಸಲಾಗಿದೆ. ಈ ಸಂಬಂಧ ಅಧಿಕೃತವಾಗಿ ‘ಕಾಸ್ಟಿಂಗ್ ಕಾಲ್’ (Casting Call) ಘೋಷಿಸಲಾಗಿದ್ದು, ನಟನೆಯಲ್ಲಿ ಆಸಕ್ತಿವಿರುವ ಉತ್ಸಾಹಿ ಪ್ರತಿಭೆಗಳಿಗೆ ಸುವರ್ಣಾವಕಾಶ ಕಲ್ಪಿಸಲಾಗಿದೆ.

​ಆಡಿಷನ್ ವಿವರಗಳು ಹಾಗೂ ಅರ್ಹತಾ ಮಾನದಂಡಗಳು:

  • ​ದಿನಾಂಕ ಮತ್ತು ಸಮಯ: ಅಕ್ಟೋಬರ್ 02, 2026 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಆಡಿಷನ್ ನಡೆಯಲಿದೆ.
  • ​ಸ್ಥಳ: ವಿಜಯಾ ಕಾಲೇಜು, 4ನೇ ಬ್ಲಾಕ್, ಜಯನಗರ, ಬೆಂಗಳೂರು.
  • ​ವಯೋಮಿತಿ:
    • ​ಪುರುಷರು: 20 ರಿಂದ 65 ವರ್ಷದವರು.
    • ​ಮಹಿಳೆಯರು: 20 ರಿಂದ 60 ವರ್ಷದವರು.
    .
    • ​ಅಗತ್ಯವಿರುವ ಅರ್ಹತೆಗಳು: ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ ಹೊಸ ಪ್ರತಿಭೆಗಳು ಹಾಗೂ ಉತ್ತರ ಕರ್ನಾಟಕದ ಭಾಷಾಶೈಲಿ ತಿಳಿದಿರುವವರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
    ​ನಟನೆಯ ಕನಸು ಹೊತ್ತುಕೊಂಡು ಸಿನಿರಂಗದಲ್ಲಿ ಗುರುತಿಸಿಕೊಳ್ಳಲು ಬಯಸುವ ಆಸಕ್ತ ನಟ-ನಟಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

Leave a Reply

Your email address will not be published. Required fields are marked *