sakhigeetha.com

Top 1 Women's Magazines & Publications

Latest:
ಸ್ತ್ರೀ ...ಅಂತಃಪುರ

ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸರ್ಕಾರದಿಂದ ಸಿಗಲಿದೆ ಭಾರಿ ಸಾಲ! ಶೇಕಡಾ 30 ಸಬ್ಸಿಡಿ! ಅರ್ಜಿ ಸಲ್ಲಿಸುವುದು ಹೇಗೆ? ಉದ್ಯೋಗಿನಿ ಯೋಜನೆ ಸಾಲ

ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗ ಅಥವಾ ಸಣ್ಣ ಬಿಸಿನೆಸ್ ಮಾಡಲು ಬಯಸುವ ಮಹಿಳೆಯರಿಗೆ ಕರ್ನಾಟಕ ಸರ್ಕಾರವು ಭಾರಿ ಆರ್ಥಿಕ ನೆರವು ನೀಡುತ್ತಿದೆ. ಸರ್ಕಾರದ “ಉದ್ಯೋಗಿನಿ ಯೋಜನೆ”ಯಡಿ (Udyogini Scheme) ಮಹಿಳೆಯರು ಉದ್ಯೋಗ ಆರಂಭಿಸಲು ಭಾರಿ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉದ್ಯೋಗಿನಿ ಯೋಜನೆ ಸಾಲ

ಯಾವ ಉದ್ಯೋಗಗಳಿಗೆ ಸಾಲ ಸಿಗುತ್ತದೆ?

ಮನೆಯಲ್ಲೇ ಮಾಡಬಹುದಾದ ಹೊಲಿಗೆ ಯಂತ್ರ (ಟೈಲರಿಂಗ್), ಬ್ಯೂಟಿ ಪಾರ್ಲರ್, ಹಪ್ಪಳ-ಸಂಡಿಗೆ ತಯಾರಿಕೆ, ಅಗರಬತ್ತಿ ಬಿಸಿನೆಸ್, ಡೈರಿ ಫಾರ್ಮಿಂಗ್ (ಹಸು ಸಾಕಾಣಿಕೆ), ಕರಕುಶಲ ವಸ್ತುಗಳ ತಯಾರಿಕೆ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಸಣ್ಣ ಉದ್ಯೋಗಗಳಿಗೆ ಈ ಯೋಜನೆಯಡಿ ಸಾಲ ಸಿಗಲಿದೆ.

ಸಾಲ ಮತ್ತು ಸಬ್ಸಿಡಿ ವಿವರ:

  • ಈ ಯೋಜನೆಯಡಿ ಮಹಿಳೆಯರು ತಮ್ಮ ಬಿಸಿನೆಸ್ ಐಡಿಯಾಕ್ಕೆ ತಕ್ಕಂತೆ 3 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು.
  • ವಿಶೇಷವೆಂದರೆ, ಇದರಲ್ಲಿ ಸರ್ಕಾರದಿಂದ ಶೇಕಡಾ 30 ರಷ್ಟು ಸಬ್ಸಿಡಿ (ರಿಯಾಯಿತಿ) ಸಿಗಲಿದೆ. ಅಂದರೆ ನೀವು ಪಡೆದ ಸಾಲದಲ್ಲಿ ದೊಡ್ಡ ಮೊತ್ತವನ್ನು ಸರ್ಕಾರವೇ ಕಟ್ಟುತ್ತದೆ!
  • ವಿಧವೆಯರು, ವಿಕಲಚೇತನರು ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  1. ಆಧಾರ್ ಕಾರ್ಡ್ (Aadhaar Card)
  2. ಪಡಿತರ ಚೀಟಿ (Ration Card)
  3. ವಯಸ್ಸಿನ ಪ್ರಮಾಣ ಪತ್ರ (18 ರಿಂದ 55 ವರ್ಷದೊಳಗಿರಬೇಕು)
  4. ಆದಾಯ ಮತ್ತು ಜಾತಿ ಪ್ರಮಾಣ ಪತ್ರ
  5. ಬ್ಯಾಂಕ್ ಖಾತೆ ಪಾಸ್‌ಬುಕ್ (Bank Passbook)

ಅರ್ಜಿ ಎಲ್ಲಿ ಸಲ್ಲಿಸಬೇಕು?

ಬಯಸುವ ಮಹಿಳೆಯರು ತಮ್ಮ ಜಿಲ್ಲೆಯ “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ”ಯ ಕಚೇರಿಗೆ (WCD Office) ಭೇಟಿ ನೀಡಿ ಅರ್ಜಿ ಫಾರ್ಮ್ ಪಡೆದು ಸಲ್ಲಿಸಬಹುದು. ಅಥವಾ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಮೂಲಕವೂ ಮಾಹಿತಿ ಪಡೆಯಬಹುದು.

Leave a Reply

Your email address will not be published. Required fields are marked *