ಸಖೀ ಸುದ್ದಿ
ದೇವೇಗೌಡರ ತಂದೆಗೆ ಇಬ್ಬರು ಪತ್ನಿಯರು : ಅವರಿಗೆ ಪಿಂಡ ಪ್ರದಾನ ಮಾಡಲಾಗಿದೆ
ಬೆಂಗಳೂರು : ಜೆಡಿಎಸ್ ವರಿಷ್ಠ ದೇವೇಗೌಡ ಅವರು ಮೊಮ್ಮಕ್ಕಳ ಗೆಲುವಿಗಾಗಿ ಪೂಜೆ ಮಾಡಿಸಿಲ್ಲ. ಅವರ ತಾಯಂದಿರಿಗೆ ಸದ್ಗತಿ ಸಿಗಲೆಂದು ದೇವರ ಮೊರೆಹೋಗಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಚಿಕ್ಕಮಗಳೂರಿಗೆ ಹೋಗಿದ್ದು ಪೂಜೆ ಮಾಡಿಸಲು ಅಲ್ಲ. ಬದಲಿಗೆ, ಪಿಂಡ ಪ್ರದಾನ ಮಾಡುವ ಶ್ರಾದ್ಧ ಕರ್ಮ ಮಾಡಿಸಲು ಹೋಗಿದ್ದೆವು.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ತಂದೆಗೆ ಇಬ್ಬರು ಪತ್ನಿಯರಿದ್ದರು. ಪ್ಲೇಗ್ ರೋಗ ಬಂದು ಅವರು ಅಕಾಲ ಮರಣಕ್ಕೆ ತುತ್ತಾಗಿದ್ದರು. ಅವರ ಸದ್ಗತಿ ಆಗಬೇಕೆಂದು ಜ್ಯೋತಿಷಿಗಳು ಸಲಹೆ ಮಾಡಿದ್ದರು. ಹೀಗಾಗಿ ಚಿಕ್ಕಮಗಳೂರಿನ ಕಾಪು ಬಳಿ ಶ್ರಾದ್ಧ ಕರ್ಮವನ್ನು ತಂದೆಯವರು ನೆರವೇರಿಸಿದ್ದಾರೆ.
ಇದು ನಿಖಿಲ್ ಅಥವಾ ಪ್ರಜ್ವಲ್ ಗೆಲುವಿಗೆ ಮಾಡಿಸಿದ ಪೂಜೆಯಲ್ಲ. ಆ ಪೂಜೆಯಲ್ಲಿ ನಿಖಿಲ್ ಮತ್ತು ಪ್ರಜ್ವಲ್ ಹಾಗೂ ನನ್ನ ಮತ್ತು ಕುಮಾರಸ್ವಾಮಿಯವರ ಪತ್ನಿ ಭಾಗಿಯಾಗಿರಲಿಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.