“
ಬೆಂಗಳೂರಿನ ಶೃಂಗೇರಿ ಶಂಕರಮಠದ “ಅವನಿ” ಸಭಾಂಗಣದಲ್ಲಿ ಅಕ್ಟೋಬರ್ 1 ರಂದು ಆರಂಬ್ಗವಾಗಿ ಮೂರುದಿನಗಳ ಕಾಲ ನಡೆಯಲಿದೆ.
“ಅವೇಕ್” AWAKE ( Association of women entrepreneurs of Karnataka) ಎಂಬ ಸಂಸ್ಥೆಯ ಹೆಸರನ್ನು ಕೇಳಿದಕೂಡಲೇ ಮಹಿಳಾ ಉದ್ಯಮ ಲೋಕವೇ ಕಣ್ಮುಂದೆ ತೆರೆತೆರೆಯಾಗಿ ಮೂಡಿಬರುತ್ತದೆ. ಇದುವರೆಗೂ ಅದೆಷ್ಟು ನಾರಿಯರ ಬದುಕಲ್ಲಿ ಭರವಸೆಯ ಬೆಳಕನ್ನು ಚೆಲ್ಲುತ್ತಾ, ಮಾರ್ಗದರ್ಶನ ನೀಡುತ್ತಾ, ಜೀವನವನ್ನು ಹಸನುಗೊಳಿಸುತ್ತಾ ಸಾರ್ಥಕ ಹೆಜ್ಜೆಗಳನ್ನು ಇಡುತ್ತಿದೆಯೋ…ಲೆಕ್ಕವೇ ಇಲ್ಲ. ಹಾಗಾಗಿಯೇ ಅವೇಕ್ ಎಂಬ ಈ ಎನ್.ಜಿ.ಒ ಸಂಸ್ಥೆಯ ಬಗ್ಗೆ ಕರ್ನಾಟಕದ ಹೆಣ್ಣುಮಕ್ಕಳಿಗೆ ಹೆಮ್ಮೆಯ ತವರು ಎಂಬ ಅಕ್ಕರೆ, ಅಭಿಮಾನ!!
ಉದ್ಯಮಿಯಾಗಬಯಸುವ ಹೆಣ್ಣುಮಕ್ಕಳಿಗೆ ಸೂಕ್ತ ತರಬೇತಿ , ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೆ ಉತ್ಪನ್ನಗಳ ಮಾರಾಟಕ್ಕೂ ಸಹಕರಿಸುವ ಅವೆಕ್ ಎಷ್ಟೋ ಮಹಿಳೆಯರಿಗೆ ವರದಾನವಾಗಿದೆ.
ವರ್ಷ ದಲ್ಲಿ ಸುಮಾರು ನಾಲ್ಕೈದು ಬಾರಿಯಾದರೂ ವಸ್ತು ಪ್ರದರ್ಶನದ ವ್ಯವಸ್ಥೆ ಮಾಡಿ, ಆ ಮೂಲಕ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಸಾರ್ವಜನಿಕರನ್ನು ತಲುಪಿಸುವಂತೆ ಮಾಡುವುದು ಅವೇಕ್ ಸಂಸ್ಥೆಯ ಮತ್ತೊದು ಅಮೂಲ್ಯ ಕಾಯಕವಾಗಿದೆ. ಆದರೆ ಈ ಕೋವಿಡ್ ಪರಿಸ್ಥಿತಿಯ ಸಮಸ್ಯೆಯಿಂದಾಗಿ ಕಳೆದೆರಡು ವರ್ಷಗಳಿಂದ ವಸ್ತುಪ್ರದರ್ಶನವನ್ನು ಆಯೋಜಿಸಿರಲಾಗಲಿಲ್ಲ. ಅಂತೆಯೇ ಕೋವಿಡ್ ತಂದೊಡ್ಡಿದ ದುಸ್ಥಿತಿಯಿಂದಾಗಿ ಅಸಂಖ್ಯಾತ ಮಹಿಳೆಯರು ಕೆಲಸ ಕಳೆದುಕೊಂಡು ಅಸಹಾಯಕರಾಗಿದ್ದರು. ಗೃಹ ಕೈಗಾರಿಕೆಗಳಲ್ಲಿ ತಯಾರಿಸಿದ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗದೆ ಕಂಗೆಡುವಂತಾಗಿತ್ತು.
ಸಧ್ಯ, ಪ್ರಸ್ತುತ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿರುವುದರಿಂದ ಅವೇಕ್ ಸಂಸ್ಥೆಯು ಮತ್ತೇ ವಸ್ತುಪ್ರದರ್ಶನವನ್ನು ಆಯೋಜಿಸಿದೆ!
ಇದೇ ಅಕ್ಟೋಬರ್ 1 ರಂದು ಬೆಂಗಳೂರಿನ ಮಹಾಲಕ್ಷ್ಮಿಪುರಂನ ಶೃಂಗೇರಿ ಶಂಕರಮಠದ ( ವೆಸ್ಟ್ ಆಫ್ ಕಾರ್ಡ್ ರಸ್ತೆ)”ಅವನಿ” ಸಭಾಂಗಣದಲ್ಲಿ ಆರಂಭವಾದ ” ಕಲಾವೈಭವ-2021″ ವಸ್ತುಪ್ರದರ್ಶನ ಮೂರುದಿನಗಳವರೆಗೂ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಆಕರ್ಶಕ ವಿನ್ಯಾಸದ ವಸ್ತ್ರಗಳು, ಮಕ್ಕಳ ಆಟಿಕೆಗಳು, ಕರಕುಶಲ ವಸ್ತುಗಳು,ಗೃಹಾಲಂಕಾರದ ಸಾಮಗ್ರಿಗಳು, ಆಭರಣಗಳು, ಆಹಾರ ಸಾಮಗ್ರಿಗಳು, ಪರಿಶುದ್ಧ ತೈಲಗಳು, ಶೈಕ್ಷಣಿಕ ಪರಿಕರಗಳು…ಏನುಂಟು, ಏನಿಲ್ಲ! ಬಣ್ಣಬಣ್ಣದ ಚಿತ್ತಾರದ ಲೋಕವೇ ತೆರೆದುಕೊಂಡಂತಿದೆ!! ತಯಾರಕರಿಂದ ನೇರವಾಗಿ ಗ್ರಾಹಕರನ್ನು ತಲುಪುವುದರಿಂದ ಬೆಲೆಗಳೂ ಹಿತಕರವಾಗಿವೆ!! ಗಮನಾರ್ಹವಾದ ವಿಷಯವೆಂದರೆ ಸ್ತಾರ್ಟ್ ಅಪ್ ಉದ್ಯಮಿಗಳೇ ಇಲ್ಲಿ ಭಾಗವಹಿಸಿರುವುದು! ಹೊಸದೊಂದು ಕನಸು ಕಟ್ಟಿಕೊಂಡು ಉದ್ಯಮಲೋಕವನ್ನು ಪ್ರವೇಶಿಸಿ, ಸಾಧಿಸಬೇಕೆಂಬ ಆಶಯದಿಂದ ಹೆಜ್ಜೆಯಿಟ್ಟಿರುವ ಇವರಿಗೆ ಒಂದು ಸಣ್ಣ ಭರವಸೆ ನೀಡುವುದಕ್ಕಾದರೂ ಎಲ್ಲರೂ ಈ ವಸ್ತುಪ್ರದರ್ಶನಕ್ಕೆ ಭೇಟಿ ನೀಡಬೇಕು!…ಖಂಡಿತಾ ನಿಮಗೆ ನಿರಾಸೆಯೂ ಆಗುವುದಿಲ್ಲ. ಈ ವಸ್ತುಪ್ರದರ್ಶನದಲ್ಲಿರುವ ಉತ್ಪನ್ನಗಳನ್ನು ನೋಡಿದರೆ ಮನಸ್ಸು ಅರಳುವುದು ನಿಶ್ಚಯ!!
ಈ ವಸ್ತುಪ್ರದರ್ಶನದಲ್ಲಿ ಭಾಗವಹಿಸಿರುವ ಮಹಿಳಾ ಉದ್ಯಮಿಗಳು ತಮ್ಮ ಉದ್ಯಮವನ್ನು ಕೇವಲ ವ್ಯವಹಾರಿಕ ದೃಷ್ಟಿಯಿಂದ ನೋಡದೆ , ಅದಕ್ಕೊಂದು ಕಲಾತ್ಮಕ ಸ್ಪರ್ಶವನ್ನು ನೀಡಿ, ಜನರಿಗೆ ಉಪಯೋಗವಾಗುವಂತೆ ಉತ್ಪನ್ನಗಳನ್ನು ತಯಾರಿಸಿರುವುದು ಮತ್ತೊಂದು ವಿಶೇಷ. ಎಷ್ಟೋ ವರ್ಷಗಳ ಕಾಲ ಸಂಸಾರದ ಜಂಜಾಟದೊಳಗೆ ತಮ್ಮೊಳಗಿರುವ ಕಲೆಯನ್ನು, ಪ್ರತಿಭೆಯನ್ನು ಹಾಗೇ ಮುಚ್ವಿಟ್ಟುಕೊಂಡಿರುವ ಮಹಿಳೆಯರು ಇಂದು ಧೈರ್ಯದಿಂದ, ಆತ್ಮವಿಶ್ವಾಸದಿಂದ ಉದ್ಯಮಿಗಳಾಗಿ ಹೊರಹೊಮ್ಮಿರುವುದನ್ನು ನೋಡುವುದೇ ಒಂದು ಸಂಭ್ರಮ!!
ಶ್ರೀನತಿ ಪದ್ಮಾ ವಿಟ್ಟಲ್ ಎಂಬ ಮಹಿಳೆ ಸಾಫ್ಟ್ ಗೊಂಬೆಗಳನ್ನು ತಯಾರಿಸಿ ಮಾರಾಟ ಮಾಡುವುದರ ಜೊತೆಗೆ ಕಸೂತಿ, ಜರಿ ವರ್ಕ್ ತರಗತಿಗಳನ್ನೂ ನಡೆಸುತ್ತಿದ್ದಾರೆ. ಈ ವಸ್ತುಪ್ರದರ್ಶನದಲ್ಲಿ ಅವರು ತಯಾರಿಸಿದ ಸುಂದರವಾದ, ಆಕರ್ಶಕವಾದ ವಿಧವಿಧವಾದ ಗೊಂಬೆಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.
ಕಲಾವಿದೆ ಕಾವ್ಯರವರು ವಿನೂತನ ಹಾಗೂ ವಿಶಿಷ್ಠವಾದ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸಿ ಮಾರಾಟಕ್ಕಿಟ್ಟಿದ್ದಾರೆ. ಫೋಟೋ ನೋಡಿ ಅದರಂತೆಯೇ ಚಿತ್ರವನ್ನು ರಚಿಸಿ ಕೊಡುವ ಅದ್ಭುತ ಕಲಾಪ್ರತಿಮೆ ಇವರದು.
ಲಕ್ಷ್ಮಿ ಹೋಮ್ ಪ್ರಾಡಕ್ಟ್ಸ್ ನವರು ಅತ್ಯಂತ ಪರಿಶುದ್ಧವಾದ ತೈಲಗಳನ್ನು, ಜೇನುತುಪ್ಪವನ್ನು , ತುಪ್ಪವನ್ನು ಮುಂತಾದ ಸಾಮಗ್ರಿಗಳನ್ನು ತಯಾರಿಸಿದ್ದಾರೆ. ವಿವಿಧ ಹಣ್ಣುಗಳಿಂದ ತಯಾರಿಸಿದ ಸಾಮಗ್ರಿಗಳು ಇವರ ಸ್ಟಾಲ್ ನಲ್ಲಿ ದೊರಕುತ್ತವೆ.
ನಯೋಮಿಕ ಅಂಡ್ ಕಂಪೆನಿಯವರು ತಯಾರಿಸಿರುವ ಯಂತ್ರೋತ್ಪನ್ನಗಳು ವಿಶಿಷ್ಠವಾಗಿದ್ದು ನಿತ್ಯಜೀವನಕ್ಕೆ ತುಂಬಾ ಉಪಯೋಗಕರವಾಗಿವೆ. ಹೈ ಪ್ರೆಸರ್ ವಾಶಿಂಗ್ ಯಂತ್ರಗಳು, ಚಾಫ್ ಕಟರ್ ಗಳು, ಡೀಸೆಲ್/ ಎಲೆಕ್ಟ್ರಿಕ್ ಪವರ್ ಸ್ಪ್ರೇಯರ್….ಹೀಗೆ ಅನೇಕ ಬಗೆಯ ಯಂತ್ರೋಪಕರಣಗಳ ಮಾಹಿತಿಯನ್ನು ಪಡೆಯಬಹುದು.
ಈ ಮೇಲೆ ನೀಡಿದ್ಫ಼ು ಕೆಲವು ಉದಾಹರಣೆಗಳು ಮಾತ್ರ. ಇಂಥ ಇನ್ನೂ ಅನೇಕ ಉತಪನ್ನಗಳು ಈ ವಸ್ತು ಪ್ರದರ್ಶನದಲ್ಲಿ ಲಭ್ಯವಿದೆ. ನೀವು ತಕ್ಷಣ ಕೊಳ್ಳಬೇಕೆಂತಲೂ ಇಲ್ಲ. ಇಲ್ಲಿ ಮಾಹಿತಿಯನ್ನು ಪಡೆದು, ನಿಮಗೆ ಬೇಕೆಂದಾಗ ಒಂದು ಕರೆ ಮಾಡಿದರೂ ಸಾಕು. ನಿಮಗೆ ಆ ಉತ್ಪನ್ನಗಳನ್ನು ತಲುಪಿಸುತ್ತಾರೆ ಈ ಹೊಸ ಉದ್ಯಮಿಗಳು!
ಇಂಥ ಒಂದು ಸೃಜನಶೀಲ ವಸ್ತುಪ್ರದರ್ಶನಕ್ಕೆ ಉದ್ಘಾಟನೆಯ ಸಂದರ್ಭದಲ್ಲಿ ಆಹ್ವಾನ್ವಿತಳಾಗಿ ನಾನು ಭಾಗವಹಿಸುವ ಸುಂದರ ಅವಕಾಶ!! ಅವೇಕ್ ಸಂಸ್ಥೆಯ ಅಧ್ಯಕ್ಷೆ ಡಾ. ರಾಜೇಶ್ವರಿಯವರು,ಉಪಾದ್ಯಕ್ಷೆ ಹಂಸರವರು, ಕಾರ್ಯದರ್ಶಿ ಆಶಾರವರು, ಸಹಕಾರ್ಯದರ್ಶಿ ಉಮಾ ಅಶೋಕ್ ರವರು, ಖಚಾಂಜಿ ಭುವನೇಶ್ವರಿಯವರು, ವಸ್ತುಪ್ರದರ್ಶನದ ಮುಖ್ಯಸ್ಥೆ ರಜನಿ ರಮೇಶ್ ರವರು ಹಾಗೂ ಉಳಿದ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡು, ವಸ್ತುಪ್ರದರ್ಶನದ ಎಲ್ಲಾ ವಿಭಾಗಗಳನ್ನೂ ಪರಿಚಯಿಸಿದರು. ಉದಯೋನ್ಮುಖ ನಟಿ, ರೂಪದರ್ಶಿ ಯುಕ್ತಾ ಎಡಿಗರ್ ಸಹ ಮತ್ತೊಬ್ಬ ಆಹ್ವಾನ್ವಿತಳಾಗಿ ಆಗಮಿಸಿದ್ದರು.